alex Certify BIG BREAKING NEWS: ಸ್ಯಾಂಡಲ್ ವುಡ್ ಗೆ ಕೊರೋನಾ ಬಿಗ್ ಶಾಕ್ -ಖ್ಯಾತ ನಟಿ ಮಾಲಾಶ್ರೀ ಪತಿ, ಕೋಟಿ ನಿರ್ಮಾಪಕ ರಾಮು ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಸ್ಯಾಂಡಲ್ ವುಡ್ ಗೆ ಕೊರೋನಾ ಬಿಗ್ ಶಾಕ್ -ಖ್ಯಾತ ನಟಿ ಮಾಲಾಶ್ರೀ ಪತಿ, ಕೋಟಿ ನಿರ್ಮಾಪಕ ರಾಮು ನಿಧನ

ಬೆಂಗಳೂರು: ಕೊರೊನಾದಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ಮೃತಪಟ್ಟಿದ್ದಾರೆ. ರಾಮು ಎಂಟರ್ ಪ್ರೈಸಸ್ ಮೂಲಕ ಅದ್ದೂರಿ ವೆಚ್ಚದ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದ ರಾಮು ಕೋರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕಳೆದವಾರ ಕೊರೊನಾ ಸೋಂಕು ತಗಲಿದ್ದರಿಂದ ರಾಮು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೂರು ದಿನಗಳ ಹಿಂದೆ ರಾಮು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಲಾಕಪ್ ಡೆತ್’, ‘ಗೂಳಿ, ‘ಎಕೆ 47’, ‘ಸಿಂಹದ ಮರಿ’, ‘ರಾಕ್ಷಸ’, ‘ಕಲಾಸಿಪಾಳ್ಯ’ ಮೊದಲಾದ ಚಿತ್ರ ನಿರ್ಮಿಸಿದ್ದಾರೆ. ಕನ್ನಡದಲ್ಲಿ ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದ ರಾಮು ‘ಕೋಟಿ ರಾಮು’ ಎಂದೇ ಖ್ಯಾತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...