alex Certify ಕೊರೊನಾ ʼಲಸಿಕೆʼ ಹಾಕಿಸಿಕೊಳ್ಳಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ʼಲಸಿಕೆʼ ಹಾಕಿಸಿಕೊಳ್ಳಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ದೇಶದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 1,73,06,647 ತಲುಪಿದ್ದು ಸಾವಿಗೀಡಾದವರ ಸಂಖ್ಯೆ 1,95,119 ಆಗಿದೆ. ಇಲ್ಲಿಯವರೆಗೆ 140.9 ಮಿಲಿಯನ್ ಡೋಸ್​ ಲಸಿಕೆಗಳನ್ನ ನೀಡಲಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಬಳಿಕ ದಿನಕ್ಕೆ ಸರಾಸರಿ 2165 ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಭಯದಿಂದ ಜನರು ಲಸಿಕಾ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಿದೆ .

ಆದರೆ ಲಸಿಕಾ ಕೇಂದ್ರಗಳಲ್ಲಿ ಹೆಚ್ಚುತ್ತಿರುವ ಜನದಟ್ಟಣೆ ಕೂಡ ಆತಂಕಕಾರಿ ವಿಚಾರವಾಗಿದೆ. ಈ ವಿಷಯವಾಗಿ ಮುಂಬೈನ ವೈದ್ಯ ಡಾ. ತುಷಾರ್ ಶಾ​ ಎಂಬವರು ವಿಡಿಯೋವೊಂದನ್ನ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಲಸಿಕಾ ಕೇಂದ್ರದಲ್ಲಿ ಲಸಿಕೆಯನ್ನಷ್ಟೇ ಪಡೆದುಕೊಂಡು ಬನ್ನಿ ಬದಲಾಗಿ ಸೋಂಕನ್ನಲ್ಲ ಎಂದು ಹೇಳಲಾಗಿದೆ. ಇದರಲ್ಲಿ ಡಾ. ಶಾ ಪ್ಲೇ ಕಾರ್ಡ್​ ಸಹಾಯದಿಂದ ಲಸಿಕೆ ಕೇಂದ್ರಗಳಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಅನ್ನೋದ್ರ ಬಗ್ಗೆ ಮಾಹಿತಿ ನೀಡಿದ್ದಾರೆ.

ವೈದ್ಯ ಶಾ ಮಾಸ್ಕ್​ ಬಳಕೆ ಮಾಡುವ ಮಹತ್ವವನ್ನ ಹೇಳಿದ್ದಾರೆ. ಆದಷ್ಟು ಡಬಲ್ ಮಾಸ್ಕ್ ಧರಿಸಿ ಅಂತಲೂ ವೈದ್ಯ ಸಲಹೆ ನೀಡಿದ್ದಾರೆ. ಎನ್​ 95 ಮಾಸ್ಕ್​ಗಳ ಮೇಲೆ ಬಟ್ಟೆಯ ಇಲ್ಲವೇ ಸರ್ಜಿಕಲ್​ ಮಾಸ್ಕ್​​ ಧರಿಸಿ. ಕೈನಿಂದ ಪದೇ ಪದೇ ಮುಖ, ಕಣ್ಣು, ಹಾಗೂ ಮೂಗನ್ನ ಮುಟ್ಟಿಕೊಳ್ಳಬೇಡಿ. ಗ್ಲೌಸ್​ಗಳನ್ನ ಬಳಕೆ ಮಾಡಿ. ಯಾರ ಜೊತೆಯೂ ಕೈಕುಲುಕಿ ಮಾತನಾಡುವ ಅವಶ್ಯಕತೆ ಬೇಡ. ನೀವು ಗ್ಲೌಸ್​ ಧರಿಸಿದ್ದರೂ ಕೈಕುಲುಕಬೇಡಿ. ಗ್ಲೌಸ್​ ಧರಿಸಿದ್ದರೂ ಸ್ಯಾನಿಟೈಸರ್​ ಬಳಕೆ ಮಾಡಿ. ಅಲ್ಲದೇ ಕ್ಯೂನಲ್ಲಿ ನಿಂತಾಗ ಇನ್ನೊಬ್ಬರ ಜೊತೆ ಮಾತನಾಡಬೇಡಿ ಎಂದಿದ್ದಾರೆ.

— Zucker Doctor (@DoctorLFC) April 24, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...