ರಾಜ್ಯದಲ್ಲಿ ಕಠಿಣ ರೂಲ್ಸ್ ಮುಗಿಯುವವರೆಗೆ ಲಸಿಕೆ ನೀಡುವುದಿಲ್ಲವೆಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಟಫ್ ರೂಲ್ಸ್ ಜಾರಿಗೆ ತರಲಾಗುತ್ತಿದೆ. ಮೇ 1 ರಿಂದ 18 -45 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ 14 ದಿನ ಟಫ್ ರೂಲ್ಸ್ ಜಾರಿಯಲ್ಲಿರುವುದರಿಂದ ರೂಲ್ಸ್ ಮುಗಿಯುವವರೆಗೆ ಲಸಿಕೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
8 -10 ವಾರಗಳ ನಂತರವೂ ಎರಡನೇ ಡೋಸ್ ಲಸಿಕೆ ಪಡೆಯಬಹುದಾಗಿದೆ. ಈಗಾಗಲೇ ಮೊದಲ ಡೋಸ್ ಪಡೆದವರಿಗೆ ಹೀಗೆಂದು ಸಚಿವರು ಸಲಹೆ ನೀಡಿದ್ದು, ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.