alex Certify ಅಪರೂಪದ ಮನೆಯೊಂದರ ಫೋಟೋ ʼಗೂಗಲ್ ಮ್ಯಾಪ್ʼ ನಲ್ಲಿ ಸೆರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಮನೆಯೊಂದರ ಫೋಟೋ ʼಗೂಗಲ್ ಮ್ಯಾಪ್ʼ ನಲ್ಲಿ ಸೆರೆ…!

ಗೂಗಲ್​ ಮ್ಯಾಪ್​​ ಅಪ್ಲಿಕೇಶನ್​ನ್ನು ಬಹುತೇಕ ಎಲ್ಲರೂ ಬಳಕೆ ಮಾಡುತ್ತಾರೆ. ಗೊತ್ತಿರದ ಸ್ಥಳಗಳಿಗೆ ಭೇಟಿ ನೀಡಲು ಈ ಅಪ್ಲಿಕೇಶನ್​ ತುಂಬಾನೇ ಸಹಕಾರಿ. 360 ಡಿಗ್ರಿ ಕ್ಯಾಮರಾದ ಸಹಾಯದಿಂದ ಈ ಅಪ್ಲಿಕೇಶನ್​ ಮೂಲಕ ನೀವು ಟ್ರಾಫಿಕ್​ ಸಿಗ್ನಲ್​, ಲ್ಯಾಂಪ್​ ಪೋಸ್ಟ್​​ ಹೀಗೆ ಎಲ್ಲವನ್ನ ನೋಡಬಹುದಾಗಿದೆ.

ಕೆಲವೊಮ್ಮೆ ಈ ಅಪ್ಲಿಕೇಶನ್​​ನಲ್ಲಿ ಸೆರೆಯಾಗುವ ಫೋಟೋಗಳು ನಂಬಲು ಆಗದೇ ಇರುವ ರೀತಿಯಲ್ಲಿ ಇರುತ್ತೆ. ಇಂತಹ ಕಾರಣಗಳಿಗಾಗಿ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಈ ಸಾಲಿಗೆ ಇದೀಗ ಇಂತದ್ದೇ ಇನ್ನೊಂದು ಫೋಟೋ ಸೇರಿದೆ. ಗೂಗಲ್ ಮ್ಯಾಪ್​ನ ಈ ಫೋಟೋದಲ್ಲಿ ನಿಮಗೆ ಹೊಳೆಯುವ ಮನೆಗಳು ಕಾಣಿಸುತ್ತಿರಬಹುದು. ಇದನ್ನ ಅನೇಕರು ಏಲಿಯನ್​ ಲೇಸರ್ ಎಂದು ಕರೆದಿದ್ದಾರೆ. ಈ ಫೋಟೋವನ್ನ ರೆಡಿಟ್​ನಲ್ಲಿ ಶೇರ್​ ಮಾಡಲಾಗಿದೆ. ಅಲ್ಲದೇ ಇದೊಂದು ದ್ವೀಪದಲ್ಲಿ ತೆಗೆದ ಫೋಟೊ ಎಂದು ಹೇಳಲಾಗಿದೆ.

ನಾನು ಈ ಹೊಳೆಯುವ ಮನೆಗಳನ್ನ ಪತ್ತೆ ಮಾಡಿದ್ದೇನೆ (ಇದನ್ನ ಹೊರತುಪಡಿಸಿ ಬೇರೆ ಮನೆಗಳು ಇಷ್ಟೊಂದು ಪ್ರಕಾಶಮಾನವಾಗಿ ಹೊಳೆಯುತ್ತಿಲ್ಲ). ಈ ಮನೆ ಯಾಕೆ ಇಷ್ಟೊಂದು ಹೊಳೆಯುತ್ತಿದೆ ಎಂದು ಯಾರಿಗಾದರೂ ಐಡಿಯಾ ಇದೆಯೇ..? ಎಂದು ಮೂಲ ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಅನೇಕರು ಕಮೆಂಟ್​​ನಲ್ಲಿ ಇದು ಏಲಿಯನ್​ ಲೇಸರ್​ ಎಂದು ಹೇಳ್ತಿದ್ದಾರೆ. ಇನ್ನು ಕೆಲವರು ಇದು ಸೂರ್ಯನ ಬೆಳಕಿನ ಪ್ರತಿಫಲನವಾಗಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...