ನವದೆಹಲಿ: ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಲಸಿಕೆ ತೆಗೆದುಕೊಳ್ಳಬಹುದೇ ಎಂದು ಕೇಳಲಾದ ಪ್ರಶ್ನೆಗೆ ನೀತಿ ಆಯೋಗ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ. ಪೌಲ್ ಲಸಿಕೆ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಲಸಿಕೆ ತೆಗೆದುಕೊಳ್ಳಬಹುದೇ ಎಂದು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಉತ್ತರ ಹೌದು, ಲಸಿಕೆಯನ್ನು ಈ ಅವಧಿಗಳಲ್ಲಿ ತೆಗೆದುಕೊಳ್ಳಬಹುದು. ವ್ಯಾಕ್ಸಿನೇಷನ್ ಮುಂದೂಡಲು ಇದು ಯಾವುದೇ ಕಾರಣವಲ್ಲ ಎಂದು ಹೇಳಿದರು.
ದೇಶದಲ್ಲಿ ಕೊರೋನಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ COVID -19 ವ್ಯಾಕ್ಸಿನೇಷನ್ ವೇಗವನ್ನು ಕುಸಿಯಲು ನಾವು ಅನುಮತಿಸುವುದಿಲ್ಲ. ವಾಸ್ತವವಾಗಿ, ವ್ಯಾಕ್ಸಿನೇಷನ್ ಅನ್ನು ಇನ್ನಷ್ಟು ಹೆಚ್ಚಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.