
ನವದೆಹಲಿ: ಜನರು ಕೊರೋನಾ ಸೋಂಕಿನ ಭಯದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಇಡೀ ದೇಶ ಈಗ ಕೊರೋನಾ ವಿರುದ್ಧ ಹೋರಾಡಬೇಕು. ಆದರೆ, ದೇಶದ ಜನರಲ್ಲಿ ಈಗ ಅನಗತ್ಯ ಭಯ ಶುರುವಾಗಿದೆ. ಮುದ್ದು ಮುಂಚಿತವಾಗಿ ಆಸ್ಪತ್ರೆಗೆ ಹೋಗಿ ಜನ ದಾಖಲಾಗುತ್ತಿದ್ದಾರೆ. ಇದರಿಂದ ಅಗತ್ಯ ಇರುವವರಿಗೆ ಹಾಸಿಗೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
BIG BREAKING: ಆರು ತಿಂಗಳ ಕಾಲ ಎಲ್ಲ ಚುನಾವಣೆಗಳನ್ನು ಮುಂದೂಡಲು ಸರ್ಕಾರದ ಶಿಫಾರಸ್ಸು
ದೇಶದಲ್ಲಿ ಶೇಕಡ 15 ರಷ್ಟು ಕೊರೊನಾ ಸೋಂಕಿತರಿಗೆ ಮಾತ್ರ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇರುತ್ತದೆ. ಶೇಕಡ 85 ರಷ್ಟು ರೋಗಿಗಳು ಮನೆಯಲ್ಲೇ ಗುಣಮುಖರಾಗುತ್ತಾರೆ ಎಂದು ರಣದೀಪ್ ಗುಲೇರಿಯಾ ಹೇಳಿದ್ದಾರೆ.