![](https://kannadadunia.com/wp-content/uploads/2021/04/Add_a_heading_-_2021-04-25T101218.380.jpg)
ತಮಿಳು ಚಿತ್ರ ನಟ ವಿಜಯ್ ಅವರು ನಟಿಸಿರುವ ಮಾಸ್ಟರ್ ಚಿತ್ರದ ‘ವಾತಿ ಕಮಿಂಗ್…..’ ಹಾಡು ಜಾಗತಿಕವಾಗಿ ಸದ್ದು ಮಾಡುತ್ತಿದೆ.
ದಕ್ಷಿಣ ಭಾರತದಲ್ಲಿರುವ ಅವರ ಅಭಿಮಾನಿಗಳಿಗೆ ಅಷ್ಟೇ ಅಲ್ಲದೇ ವಿವಿಧ ದೇಶದ ಯುವಕರಿಗೂ ವಾತಿ ಕಮಿಂಗ್ ಕ್ರೇಜ್ ಹುಟ್ಟಿಸಿದೆ. ತಮಿಳು ಚಲನಚಿತ್ರಗಳನ್ನು ನೋಡದವರಿಗೂ ಈ ಹಾಡಿನ ಡ್ಯಾನ್ಸ್ ಮೇಲೆ ಪ್ರೀತಿ ಉಕ್ಕಿದೆ.
ತಡರಾತ್ರಿ ದುರಂತ: ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವು –ಕೋಲಾರ ಆಸ್ಪತ್ರೆಯಲ್ಲಿ ಘಟನೆ, ಸಂಬಂಧಿಕರ ಆರೋಪ
ಈಗ ಕೆನಡಾ ಮೂಲದ ‘ಬೇಸ್‌ಮೆಂಟ್ ಗ್ಯಾಂಗ್’ ಎಂಬ ನೃತ್ಯ ತಂಡವು ಈ ಹಾಡಿಗೆ ಸ್ಟೆಪ್ ಹಾಕಿದ್ದು, ಅದರ ವಿಡಿಯೊ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಕೆನಡಾ ಹುಡುಗರ ಸ್ಟೆಪ್‌ಗಳು ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲ, ಅವರು ಹಾಡಿನ ಭುಜದ ಸ್ಟೆಪ್ ಅನುಕರಿಸಿ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ ಕ್ರಿಕೆಟಿಗ ಆರ್.ಅಶ್ವಿನ್ ಇದೇ ರೀತಿ ಸ್ಟೆಪ್ ಹಾಕಿ ಸುದ್ದಿಯಾಗಿದ್ದರು.
https://www.instagram.com/p/CN7sd-_nS9K/?utm_source=ig_web_copy_link