ದೇಶದಲ್ಲಿನ ಕೊರೊನಾ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಕೊರೊನಾ ಭೀತಿಯಿಂದ ಜನ ಸಾಧ್ಯವಾದಷ್ಟು ದೂರವಿರಬೇಕಾದರೆ ತರಕಾರಿಗಳನ್ನು ಬಳಸುವಾಗ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ.
ತರಕಾರಿಗಳನ್ನು ಮನೆಗೆ ತಂದಾಕ್ಷಣ ಫ್ರಿಜ್ ನಲ್ಲಿಡಬೇಡಿ. ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಅರ್ಧ ಗಂಟೆ ಹೊತ್ತು ಹಾಗೆ ಬಿಡಿ. ಸ್ವಲ್ಪ ಕಲ್ಲು ಉಪ್ಪು ಅಥವಾ ಚಿಟಿಕೆ ಅರಿಶಿನ ಉದುರಿಸುವುದು ಇನ್ನೂ ಒಳ್ಳೆಯದು. ಒಂದು ಗಂಟೆಯ ಬಳಿಕ ಇದನ್ನು ನೀರಿನಿಂದ ಹೊರತೆಗೆದು ಒರೆಸಿ ಬಳಿಕ ಉಪಯೋಗಿಸಿ ಅಥವಾ ಫ್ರಿಜ್ ನಲ್ಲಿಡಿ.
ಮಾರುಕಟ್ಟೆಯಿಂದ ತಂದ ಹಣ್ಣು ಹಾಗೂ ತರಕಾರಿಗಳನ್ನು ಬಹುತೇಕರು ಸೋಪು ಇಲ್ಲವೇ ಸ್ಯಾನಿಟೈಸರ್ ಹಾಕಿ ತೊಳೆಯುತ್ತಿರುವ ಸುದ್ದಿಗಳು ವರದಿಯಾಗುತ್ತಿವೆ. ತಪ್ಪಿಯೂ ಇದನ್ನು ನೀವು ಮಾಡಬೇಡಿ. ವೈದ್ಯರೇ ಇದನ್ನು ದೃಢಪಡಿಸಿದ್ದು, ಅನಾವಶ್ಯಕವಾಗಿ ರೋಗಗಳನ್ನು ನೀವು ಎಳೆದುಕೊಂಡಂತಾಗಬಹುದು ಎಂದು ಎಚ್ಚರಿಸಿದ್ದಾರೆ.
ಸೋಪಿನಲ್ಲಿ ಫಾರ್ಮಲ್ಡಿಹೈಡ್ ಅಂಶಗಳಿದ್ದು, ಇವು ಆಹಾರದ ಮೂಲಕ ಹೊಟ್ಟೆಗೆ ಹೋದರೆ ಕರುಳು ನೋವು ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ದೊಡ್ಡ ಪಾತ್ರೆಗೆ ನೀರು ತುಂಬಿ ನಾಲ್ಕು ಚಮಚ ಉಪ್ಪು ಹಾಗೂ ಒಂದು ಕಪ್ ವಿನಗರ್ ಹಾಕಿ ಚೆನ್ನಾಗಿ ಕಲಕಿ. ಇದರಲ್ಲಿ ತಂದ ತರಕಾರಿ ಹಾಗೂ ಹಣ್ಣುಗಳನ್ನು ಅದ್ದಿಡಿ. ಹತ್ತು ನಿಮಿಷದ ಬಳಿಕ ತೊಳೆದರೆ ಎಲ್ಲಾ ಬ್ಯಾಕ್ಟೀರಿಯಾಗಳು ದೂರವಾಗುತ್ತವೆ ಹಾಗೂ ಸೇವನೆಗೆ ಅರ್ಹವಾಗುತ್ತವೆ.