ಬೆಂಗಳೂರು: ಉಸಿರಾಟದ ಸಮಸ್ಯೆ ಇದ್ದರೆ ಅದು ಕೂಡ ಕೊರೋನಾ ಪಾಸಿಟಿವ್ ಆಗಿರುವ ಸಾಧ್ಯತೆ ಇರುತ್ತದೆ. ಶ್ವಾಸಕೋಶಕ್ಕೆ ಸೋಂಕು ತಗಲಿದರೆ ಬದುಕುಳಿಯುವುದೇ ಕಷ್ಟ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಕುಮಾರ್ ಹೇಳಿದ್ದಾರೆ.
ವೆಂಟಿಲೇಟರ್ ಗೆ ಹೋದವರು ಬದುಕುಳಿಯುವುದು ಕಷ್ಟಸಾಧ್ಯ. ಶಾಸ್ವಕೋಶಕ್ಕೆ ಕೊರೋನಾ ಸೋಂಕು ತಗುಲಿದ ಶೇಕಡ 90 ರಷ್ಟು ಜನ ಸಾಯುತ್ತಿದ್ದಾರೆ. ಆರ್.ಟಿ.ಪಿ.ಸಿ.ಆರ್. ಟೆಸ್ಟ್ ನಲ್ಲಿ ಕೋವಿಡ್ ನೆಗೆಟಿವ್ ಬಂದಿರುತ್ತದೆ. ಆದರೆ ಅಂಥವರ ಶಾಸಕೋಶಕ್ಕೆ ಸೋಂಕು ತಗಲಿರುತ್ತದೆ. ಶಾಶ್ವಕೋಶಕ್ಕೆ ಸೋಂಕು ತಗಲುವ ಮೊದಲು ಎಚ್ಚರಿಕೆ ಅಗತ್ಯ. ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಉದಾಸೀನ ಮಾಡುವಂತಿಲ್ಲ. ನಿರ್ಲಕ್ಷ ವಹಿಸುವಂತಿಲ್ಲ ಎಂದು ಹೇಳಲಾಗಿದೆ.