ನವದೆಹಲಿ: ಕೊರೋನಾ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವುದದಿಂದ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಲಾಕ್ ಡೌನ್ ಅನ್ನು ಇನ್ನು ಒಂದು ವಾರ ವಿಸ್ತರಿಸಲು ನಿರ್ಧರಿಸಿದೆ.
ಏಪ್ರಿಲ್ 19ರಂದು ರಾಷ್ಟ್ರರಾಜಧಾನಿಯಲ್ಲಿ ಆರು ದಿನಗಳ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಏಪ್ರಿಲ್ 19 ರಿಂದ 26 ರವರೆಗೆ ಜಾರಿಗೊಳಿಸಲಾದ ಲಾಕ್ ಡೌನ್ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತಾಯವಾಗಲಿದೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಔಷಧಗಳು, ಹಾಸಿಗೆ, ಐಸಿಯು, ಆಮ್ಲಜನಕ ತೀವ್ರ ಕೊರತೆ ಕಂಡುಬಂದಿದೆ. ಹಾಗಾಗಿ ಇನ್ನೊಂದು ವಾರ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು ನಾಳೆ ನಿರ್ಧಾರ ಕೈಗೊಳ್ಳಲಾಗುವುದು.