ಚಿತ್ರದುರ್ಗ: ಒಂದೆಡೆ ಕೊರೊನಾ ಅಟ್ಟಹಾಸ ಇನ್ನೊಂದೆಡೆ ಐಪಿಎಲ್ ಅಬ್ಬರ. ಈ ನಡುವೆ ಬೆಟ್ಟಿಂಗ್ ದಂಧೆ ಕೂಡ ಜೋರಾಗಿದೆ. ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮಾಜಿ ಸಚಿವ ಡಿ. ಸುಧಾಕರ್ ಬೆಂಬಲಿಗ, ನಗರಸಭೆ ಸದಸ್ಯ ಸೇರಿದಂತೆ ನಾಲ್ವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಾಜಿ ಸಚಿವರ ಬೆಂಬಲಿಗ ನಗರಸಭೆ ಸದಸ್ಯ ಜಗದೀಶ್, ಮಾರುತಿ, ಕಿರಣ್ ಹಾಗೂ ರವಿ ಅಲಿಯಾಸ್ ಉಂಡೆ ರವಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಲಕ್ಷ ನಗದು ಹಾಗೂ 10 ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದೆ.
‘ಕೊರೊನಾ’ ಕಾಲದಲ್ಲಿ ಕೇಂದ್ರದ ಕಾರ್ಯವೈಖರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಟೀಕೆ
ಬಂಧಿತರು ಮುಂಬೈ ಇಂಡಿಯನ್ಸ್ v/s ರಾಜಸ್ಥಾನ ರಾಯಲ್ಸ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು. ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.