ನವದೆಹಲಿ: ದೇಶಿಯ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಗೆ ದರ ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ 600 ಖಾಸಗಿ ಆಸ್ಪತ್ರೆಗಳಿಗೆ 1200 ರೂಪಾಯಿ ದರದಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.
ವಿದೇಶಗಳಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು 15 -20 ಡಾಲರ್ ವೆಚ್ಚದಲ್ಲಿ ಪೂರೈಕೆ ಮಾಡಲಾಗುವುದು. ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್ ಗೆ 150 ರೂಪಾಯಿ ದರದಲ್ಲಿ ಲಸಿಕೆ ಪೂರೈಕೆ ಮಾಡಲಾಗುತ್ತದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಳ್ಡ್ ಲಸಿಕೆ ದರ ಪ್ರಕಟಿಸಿದ್ದು, ರಾಜ್ಯಸರ್ಕಾರಗಳಿಗೆ 400 ರೂ. ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುವುದು.
ಕಳೆದ 25 ವರ್ಷಗಳಿಂದ ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಔಷಧಗಳನ್ನು ಒದಗಿಸುವ ಉದ್ದೇಶದೊಂದಿಗೆ ಭಾರತ ಬಯೋಟೆಕ್ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ಹೇಳಿದ್ದಾರೆ.
ಲಸಿಕೆ ಉತ್ಪನ್ನ, ಅಭಿವೃದ್ಧಿ ಸೌಲಭ್ಯ, ಕ್ಲಿನಿಕಲ್ ಪ್ರಯೋಗ ಮೊದಲಾದ ಎಲ್ಲ ಪ್ರಾಥಮಿಕ ವೆಚ್ಚಗಳಿಗಾಗಿ ಭಾರತ್ ಬಯೋಟೆಕ್ ಸಂಪನ್ಮೂಲ ಮತ್ತು ಹಣ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.