ನವದೆಹಲಿ: ಭಾರತ್ ಬಯೋಟೆಕ್ ನಿಂದ ಕೊವ್ಯಾಕ್ಸಿನ್ ಲಸಿಕೆಗೆ ದರ ನಿಗದಿಗೊಳಿಸಲಾಗಿದೆ. ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ ಗೆ 600 ರೂಪಾಯಿ, ಖಾಸಗಿ ಆಸ್ಪತ್ರೆಗಳಿಗೆ 1200 ರೂ.ನಿಗದಿಪಡಿಸಲಾಗಿದೆ.
ಉತ್ಪಾದಿಸುವ ಲಸಿಕೆಯಲ್ಲಿ ಶೇಕಡ 50 ರಷ್ಟು ಕೇಂದ್ರಕ್ಕೆ ಮೀಸಲಾಗಿರುತ್ತದೆ. ಪ್ರತಿ ಡೋಸ್ ಗೆ 150 ರೂ. ದರದಲ್ಲಿ ಕೇಂದ್ರಕ್ಕೆ ನೀಡಲಿದ್ದು, ವಿದೇಶಗಳಿಗೆ ಡೋಸ್ ಗೆ 15 ರಿಂದ 20 ಡಾಲರ್ ವೆಚ್ಚದಲ್ಲಿ ನೀಡಲಾಗುವುದು.