ದೇಶಾದ್ಯಂತ ಕೋವಿಡ್ ದಾಳಿ ವಿಪರೀತವಾಗಿದೆ. ಜನತೆ ಮನೆ ಬಿಟ್ಟು ಹೊರ ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ವಿವಿಧ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ನಿಲುಗಡೆ ಮಾಡಲಾಗಿದೆ. ಸಾಮಾನ್ಯ ಜನ ತುರ್ತು ಸೇವೆಗೆ ಪರದಾಡುವಂತಾಗಿದೆ.
ಇದೇ ವೇಳೆ ರಾಂಚಿಯಲ್ಲಿ ಸಾಮಾಜಿಕ ಕಳಕಳಿ ಹೊಂದಿದ ಒಬ್ಬ ಆಟೋ ಚಾಲಕ, ಆಸ್ಪತ್ರೆಗೆ ತೆರಳುವವರಿಗೆ ಉಚಿತ ಸೇವೆ ನೀಡಲು ಮುಂದಾಗಿದ್ದಾನೆ.
ಬಯಲಾಯ್ತು ಖಾಸಗಿ ಆಸ್ಪತ್ರೆಗಳ ಬೆಡ್ ರಹಸ್ಯ: ಅಗತ್ಯವಿಲ್ಲದಿದ್ರೂ ರೋಗಿಗಳ ಹೆಸರಲ್ಲಿ ಹಾಸಿಗೆ ಭರ್ತಿ
ಏಪ್ರಿಲ್ 15 ರಿಂದ ನಾನು ಈ ಕೆಲಸ ಮಾಡುತ್ತಿದ್ದೇನೆ, ಆಸ್ಪತ್ರೆಗೆ ತೆರಳುವವರಿಗೆ ನನ್ನ ಸೇವೆ ಉಚಿತವಾಗಿರುತ್ತದೆ. ನನ್ನ ಮೊಬೈಲ್ ಸಂಖ್ಯೆ ಸಾಮಾಜಿಕ ಮಾಧ್ಯಮದಲ್ಲಿದೆ. ನನ್ನೂರಿನ ಜನರು ನನ್ನನ್ನು ಸಂಪರ್ಕಿಸಬಹುದು ಎಂದು ಚಾಲಕ ರಾಜು ನ್ಯೂಸ್ ಏಜೆನ್ಸಿಗೆ ಹೇಳಿಕೊಂಡಿದ್ದಾನೆ.