ಕೊರೊನಾ ಎರಡನೇ ಅಲೆ ಭಾರತದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಲಸಿಕೆ ನೀಡುವ ಕಾರ್ಯ ನಡೆಯುತ್ತಿದ್ದರೂ ಸಹ ಜನರಿಗೆ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಪದೇ ಪದೇ ಕೈ ತೊಳೆಯೋದು ಅನಿವಾರ್ಯವಾಗಿದೆ. ಆದರೆ ಇವಿಷ್ಟೇ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಕಾಗೊಲ್ಲ ಅಂತಾರೆ ಬ್ರಿಟಿಷ್ ದಂತ ವೈದ್ಯರೊಬ್ಬರು.
ದಂತ ವೈದ್ಯ ಮಾರ್ಟಿನ್ ಆಡಿ ಎಂಬವರ ಪ್ರಕಾರ, ಕೊರೊನಾ ನಿಯಂತ್ರಣ ಮಾಡಬೇಕು ಅಂದ್ರೆ ಹ್ಯಾಂಡ್ವಾಶ್ ನಷ್ಟೇ ಹಲ್ಲುಜ್ಜೋಕೂ ಕೂಡ ಪ್ರಾಮುಖ್ಯತೆ ನೀಡಬೇಕು. ಸೋಪು ಹಾಗೂ ಸ್ಯಾನಿಟೈಸರ್ನಲ್ಲಿರುವ ಕೆಲ ಅಂಶಗಳು ಟೂತ್ಪೇಸ್ಟ್ನಲ್ಲೂ ಇರುತ್ತೆ, ಹೀಗಾಗಿ ಇದು ನಿಮ್ಮ ಬಾಯಿ ಮೂಲಕ ಕೊರೊನಾ ವೈರಸ್ ಎಂಟ್ರಿ ಆಗೋದನ್ನ ತಪ್ಪಿಸುತ್ತೆ ಅಂತಾ ಹೇಳಿದ್ದಾರೆ.
ಟೂತ್ಪೇಸ್ಟ್ನಿಂದ ಬ್ರಶ್ ಮಾಡಿದ 5 ಗಂಟೆಗಳವರೆಗೆ ಅದರ ಎಫೆಕ್ಟ್ ಬಾಯಿಯಲ್ಲಿ ಇರುತ್ತೆ. ಈ ಸಮಯದಲ್ಲಿ ಎಂಜಲಿನಲ್ಲಿ ಇರುವ ಎಲ್ಲ ವೈರಸ್ಗಳನ್ನ ಟೂತ್ಪೇಸ್ಟ್ ನಾಶ ಮಾಡುವ ಶಕ್ತಿ ಹೊಂದಿದೆ. ಹೀಗಾಗಿ ಪ್ರತಿ 5 ತಾಸಿಗೊಮ್ಮೆ ಬ್ರಶ್ ಮಾಡ್ತಾ ಇರಿ ಅಂತಾ ದಂತ ವೈದ್ಯ ಸಲಹೆ ನೀಡಿದ್ದಾರೆ.