ಯೋಗರಾಜ್ ಭಟ್ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ‘ರಂಗ ಎಸ್.ಎಸ್.ಎಲ್.ಸಿ’ಚಿತ್ರ 2004 ಏಪ್ರಿಲ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು ಈ ಸಿನಿಮಾ ತೆರೆಕಂಡು ಇಂದಿಗೆ 17ವರ್ಷ ಪೂರೈಸಿದೆ.
ಈ ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಹಿರಿಯ ನಟಿ ಉಮಾಶ್ರೀ, ರಂಗಾಯಣ ರಘು, ನಾಗಶೇಖರ್, ಬ್ಯಾಂಕ್ ಜನಾರ್ದನ್, ಹಾಗೂ ದುನಿಯಾ ವಿಜಯ್, ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ರಾಜೇಶ್ ಕೃಷ್ಣನ್ ಹಾಗೂ ಕೆ. ಎಸ್. ಚಿತ್ರ ಧ್ವನಿಯಲ್ಲಿ ಮೂಡಿಬಂದ ‘ಮನಸೆ ಮನಸೆ ಥ್ಯಾಂಕ್ಯೂ’ ಎಂಬ ಈ ಚಿತ್ರದ ಹಾಡು ಇಂದಿಗೂ ಜನಪ್ರಿಯವಾಗಿದೆ.