ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿಗೆ ತಂದಿದ್ದು, ಇಂದು ರಾತ್ರಿ 9 ಗಂಟೆಯಿಂದ ಮುಂದಿನ 57 ಗಂಟೆಗಳವರೆಗೆ ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ.
ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದು, ಯಾವ ರೀತಿ ಕಠಿಣ ನಿಯಮ ಜಾರಿಯಾಗಿದೆ, ಯಾರು ಓಡಾಟ ನಡೆಸಬಹುದು, ಯಾರು ಓಡಾಟ ಮಾಡಬಾರದು ಎಂದು ಸ್ಪಷ್ಟ ಪಡಿಸಿದ್ದಾರೆ.
ರಾಜ್ಯಾದ್ಯಂತ ಎರಡು ದಿನಗಳ ಕಾಲ ಬಂದ್ ಇರಲಿದ್ದು, ಮೆಡಿಕಲ್, ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗೆ ನಿರ್ಬಂಧ ವಿಧಿಸಲಾಗಿದೆ ಎಂದರು.
* ಕರ್ಫ್ಯೂ ಹಿನ್ನೆಲೆಯಲ್ಲಿ ತುರ್ತು ಸೇವೆಯ ವಾಹನಕ್ಕೆ ಮಾತ್ರ ಅವಕಾಶ
* ಅಂತರ್ ಜಿಲ್ಲಾ ಓಡಾಟಕ್ಕೆ, ಖಾಸಗಿ ವಾಹನಕ್ಕೆ ನಿರ್ಬಂಧ
* ಟೆಲಿಕಾಂ ಕಂಪನಿ ಸಿಬ್ಬಂದಿಗಳು ಐಡಿ ಕಾರ್ಡ್ ತೋರಿಸಿ ಸಂಚರಿಸಬಹುದು
* ಶನಿವಾರ ಭಾನುವಾರ ಮೆಟ್ರೋ ಸಂಚಾರ ಸ್ಥಗಿತ. ಇಂದು ಸಂಜೆ 7:30ಕ್ಕೆ ಕೊನೇ ಸಂಚಾರ
* ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
* ಸಿನಿಮಾ, ಬಾರ್, ಪಬ್, ಜಿಮ್ ಎಲ್ಲದಕ್ಕೂ ನಿರ್ಬಂಧ.
* ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಅವಕಾಶ
* ಬಸ್, ರೈಲು, ವಿಮಾನ ಪ್ರಯಾಣಕ್ಕೆ ಅವಕಾಶ
* ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧ
* ಮದುವೆ ಕಾರ್ಯಕ್ರಮಕ್ಕೆ 50ಜನರಿಗೆ ಅವಕಾಶ
* ಪಾರ್ಕ್ ಗಳು ತೆರೆಯಲು ಅವಕಾಶ
* 2 ದಿನ ಮಾತ್ರ ಕಟ್ಟಡ ಕೆಲಸ, ಸಿವಿಲ್ ಕೆಲಸಕ್ಕೆ ನಿರ್ಬಂಧ