alex Certify ಮತ್ತೊಂದು ಐಶಾರಾಮಿ ಆಸ್ತಿ ಖರೀದಿಸಿದ ಮುಕೇಶ್​ ಅಂಬಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ಐಶಾರಾಮಿ ಆಸ್ತಿ ಖರೀದಿಸಿದ ಮುಕೇಶ್​ ಅಂಬಾನಿ

ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿ 79 ಮಿಲಿಯನ್​ ಡಾಲರ್​ ಮೌಲ್ಯದ ಸ್ಟೋಕ್​ ಪಾರ್ಕ್​ನ್ನು ಖರೀದಿ ಮಾಡಿದ್ದಾರೆ.

ಮುಕೇಶ್​ ಅಂಬಾನಿ ಈಗಾಗಲೇ ಬ್ರಿಟನ್​​ನ ಪ್ರಸಿದ್ದ ಆಟಿಕೆ ಮಳಿಗೆ ಹ್ಯಾಮ್ಲೀಸ್​ನ್ನು ಖರೀದಿ ಮಾಡುವ ಮೂಲಕ ಸುದ್ದಿಯಾಗಿದ್ದರು.

ಸ್ಟೋಕ್​​​ ಪಾರ್ಕ್​ ಲಿಮಿಟೆಡ್​​ 27 ಚಾಂಪಿಯನ್​ಶಿಪ್​​ ಗಾಲ್ಪ್​ ಕೋರ್ಸ್​ ಹಾಗೂ 49 ಐಶಾರಾಮಿ ಬೆಡ್​ರೂಮ್​ ಹೊಂದಿರುವ ಹೋಟೆಲ್​, 13 ಟೆನ್ನಿಸ್​ ಕೋರ್ಟ್​ ಹಾಗೂ 14 ಎಕರೆ ಖಾಸಗಿ ಪಾರ್ಕ್​ನ್ನು ಹೊಂದಿದೆ.

ಈ ಐಶಾರಾಮಿ ವ್ಯವಸ್ಥೆ ಮೂಲಕ ಈ ವಿಶೇಷ ಲೋಕಕ್ಕೆ ಪ್ರವಾಸಿಗರನ್ನ ಆಕರ್ಷಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್​ ಹೇಳಿದೆ.

ಜೇಮ್ಸ್ ಬಾಂಡ್​ 1964ರ ಬ್ಲಾಕ್​ಬಸ್ಟರ್​ ಫಿಲಂನಲ್ಲಿ ಆರಿಕ್​ ಗೋಲ್ಡ್​ ಫಿಂಗರ್​ ಜೊತೆ ಒಂದು ಆಟವನ್ನ ಆಡಿದ್ದರು. ಇದಾದ ಬಳಿಕ ಈ ಆಸ್ತಿಯ ರೋಲಿಂಗ್​ ಗಾಲ್ಫ್​ ಕೋರ್ಸ್​ ಪ್ರಸಿದ್ಧಿ ಪಡೆದಿದೆ. ಅಲ್ಲಿಂದ 300 ಎಕರೆ ಪಾರ್ಕ್ ಲ್ಯಾಂಡ್​ನಲ್ಲಿ ಬ್ರಿಡ್ಜೆಟ್ ಜೋನ್ಸ್ ಡೈರಿ ಸಿನಿಮಾ ಹಾಗೂ ದಿ ಕ್ರೌನ್​​ನಂತಹ ಐತಿಹಾಸಿಕ ಡ್ರಾಮಾವನ್ನ ಚಿತ್ರೀಕರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...