alex Certify ಬಾಲಕನ ಪ್ರಾಣ ಉಳಿಸಿದ್ದು ಮಾತ್ರವಲ್ಲ ಆತನ ವಿದ್ಯಾಭ್ಯಾಸಕ್ಕೂ ನೆರವಾಗಲು ಮುಂದಾದ ರೈಲ್ವೇ ನೌಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಪ್ರಾಣ ಉಳಿಸಿದ್ದು ಮಾತ್ರವಲ್ಲ ಆತನ ವಿದ್ಯಾಭ್ಯಾಸಕ್ಕೂ ನೆರವಾಗಲು ಮುಂದಾದ ರೈಲ್ವೇ ನೌಕರ

ರೈಲ್ವೆ ಹಳಿ ಮೇಲೆ ಪುಟ್ಟ ಬಾಲಕನ ಪ್ರಾಣ ಉಳಿಸಿದ ರೈಲ್ವೆ ಪಾಯಿಂಟ್ ಮೆನ್ ಮಯೂರ್ ಶೆಲ್ಕೆ ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾರೆ.

ಥಾಣೆ ಜಿಲ್ಲೆ ವಂಗಾನಿಯಲ್ಲಿ ದೃಷ್ಟಿದೋಷ ಹೊಂದಿದ ತಾಯಿಯೊಂದಿಗೆ ತೆರಳುತ್ತಿದ್ದ ಪುಟ್ಟಮಗು ರೈಲ್ವೆ ಪ್ಲಾಟ್ ಫಾರ್ಮ್‌ನಿಂದ ಟ್ರ್ಯಾಕ್ ಮೇಲೆ ಆಕಸ್ಮಿಕವಾಗಿ ಬಿದ್ದಿದ್ದು, ಇದೇ ವೇಳೆ ರೈಲು ಕೂಡ ಟ್ರ್ಯಾಕ್ ಮೇಲೆ ಬರುತ್ತಿತ್ತು. ಇದನ್ನು ಗಮನಿಸಿದ ಮಯೂರ್ ತನ್ನ ಪ್ರಾಣ ಪಣಕ್ಕಿಟ್ಟು ರೈಲಿಗೆ ಎದುರಾಗಿ ಓಡಿ ಕೂದಲೆಳೆ ಅಂತರದಲ್ಲಿ ಮಗುವನ್ನು ರಕ್ಷಿಸಿದ್ದರು.

ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಯನ್ನು ರೈಲ್ವೆ ಇಲಾಖೆ ಸಚಿವ ಪಿಯೂಷ್ ಗೋಯಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತ್ತು, ನೆಟ್ಟಿಗರ ಹೃದಯ ಗೆದ್ದಿತ್ತು.

ಗೆಳೆಯರೆಲ್ಲ ಈಜಲು ಹೋದಾಗಲೇ ಘೋರ ದುರಂತ, ನಾಲ್ವರು ಬಾಲಕರು ನೀರು ಪಾಲು

ಇದೇ ವೇಳೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಮಯೂರ್ ಗೆ 50,000 ರೂ. ಬಹುಮಾನ ಘೋಷಿಸಿದರು. ವಿಶೇಷವೆಂದರೆ ತನಗೆ ಬಂದ ಬಹುಮಾನದ ಅರ್ಧ ಭಾಗದ ಹಣವನ್ನು ಆ ಮಗುವಿನ ಶಿಕ್ಷಣಕ್ಕಾಗಿ ಖರ್ಚು ಮಾಡುವುದಾಗಿ ಮಯೂರ್ ಘೋಷಿಸಿದ್ದಾರೆ. ಮಗುವಿನ ಕುಟುಂಬದ ಆರ್ಥಿಕ ಪರಿಸ್ಥಿತಿ ಸದೃಢವಾಗಿ ಇಲ್ಲ ಎಂದು ನನಗೆ ತಿಳಿದಿದೆ. ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅವರು ಸುದ್ದಿಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ.

ನೆಟ್ಟಿಗರು ಪುನಃ ಮಯೂರ್ ಹೃದಯವಂತಿಕೆಯನ್ನು ಕೊಂಡಾಡಿದ್ದಾರೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೀನೆ ಉದಾರಣೆ ಎಂದೆಲ್ಲ ಅಭಿಪ್ರಾಯಗಳನ್ನು ಜಾಲತಾಣದಲ್ಲಿ ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...