alex Certify ಇಲ್ಲಿದೆ ವಿಶ್ವದ ಅತ್ಯಂತ ಸುಂದರ ಮೆಕ್‌ಡೊನಾಲ್ಡ್ಸ್ ಮಳಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ವಿಶ್ವದ ಅತ್ಯಂತ ಸುಂದರ ಮೆಕ್‌ಡೊನಾಲ್ಡ್ಸ್ ಮಳಿಗೆ

ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್ ನಲ್ಲಿ ಇರುವ 19ನೇ ಶತಮಾನದ ಜಾರ್ಜಿಯನ್ ಶೈಲಿಯ ಮಹಲ್ ಈಗ ವಿಶ್ವದ ಅತ್ಯಂತ ಸುಂದರವಾದ ಮೆಕ್‌ಡೊನಾಲ್ಡ್ಸ್‌ ಮಳಿಗೆಯಾಗಿ ಪರಿವರ್ತನೆಯಾಗಿದೆ.

ಮೊದಲು 1795ರಲ್ಲಿ ಈ ಕಟ್ಟಡವನ್ನು ಫಾರ್ಮ್‌ಹೌಸ್ ಆಗಿ ನಿರ್ಮಿಸಲಾಯಿತು. 1860ರ ದಶಕದಲ್ಲಿ ಹೆಂಪ್‌ಸ್ಟಡ್ ಪಟ್ಟಣದ ಸಂಸ್ಥಾಪಕರಲ್ಲಿ ಒಬ್ಬರಾದ ಜೋಸೆಫ್ ಡೆಂಟನ್‌ಗಾಗಿ ಮಹಲ್ ಆಗಿ ಪರಿವರ್ತಿಸಲಾಯಿತು.

1985ರಲ್ಲಿ ಮೆಕ್‌ಡೊನಾಲ್ಡ್ಸ್ ಖರೀದಿಸುವ ಮೊದಲು ಪಾಳು ಬಿದ್ದಿತ್ತಂತೆ. ಸ್ಥಳೀಯರ ಆಕ್ಷೇಪದ ನಡುವೆ ಮೆಕ್ ಡೊನಾಲ್ಡ್ ಅದನ್ನು ಸರಿಪಡಿಸಿತು.

ಭಾರತದ ವಿಮಾನಗಳಿಗೆ 30 ದಿನ ನಿಷೇಧ

ನಾವು ಈ ಕಟ್ಟಡವನ್ನು ಪಡೆದಾಗ ಅನಾಹುತ ಆಗುವ ಸ್ಥಿತಿಯಲ್ಲಿತ್ತು. ಪಾರಿವಾಳಗಳು ಎಲ್ಲೆಡೆ ಇದ್ದವು ಎಂದು ಮೆಕ್‌ಡೊನಾಲ್ಡ್ಸ್‌ ನ್ಯೂಯಾರ್ಕ್ ಪ್ರಾದೇಶಿಕ ಉಪಾಧ್ಯಕ್ಷರು ಹೇಳಿದ್ದಾರೆ.

1988 ರಲ್ಲಿ ಈ ಕಟ್ಟಡವನ್ನು ಐತಿಹಾಸಿಕ ಹೆಗ್ಗುರುತಾಗಿ ಗುರುತಿಸಲಾಯಿತು. ಬಳಿಕ ಮೆಕ್‌ಡೊನಾಲ್ಡ್ಸ್‌ ಈ ಕಟ್ಟಡವನ್ನು ಪುನರುಜ್ಜೀವಗೊಳಿಸಿತು. 1920ರಲ್ಲಿದ್ದಂತೆ ಮುಂಭಾಗದ ಹೊರ ನೋಟವನ್ನು ಹೋಲುವಂತೆ ರಿಪೇರಿ ಮಾಡಿ, 1991ರಲ್ಲಿ ತೆರೆದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...