ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೋ ಆಪಲ್ ಹಾಗೂ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗಾಗಿ ಕೋವಿಡ್ 19 ತುರ್ತು ಪರಿಸ್ಥಿತಿ ಎಂಬ ಹೊಸ ಸೌಲಭ್ಯವನ್ನ ಪರಿಚಯಿಸಿದೆ.
ಈ ಆಯ್ಕೆಯನ್ನ ಬಳಸಿಕೊಂಡವರ ಫುಡ್ ಆರ್ಡರ್ಗೆ ಜೊಮ್ಯಾಟೋ ಆದ್ಯತೆ ನೀಡುತ್ತೆ ಮಾತ್ರವಲ್ಲದೇ ಆದಷ್ಟು ಬೇಗ ಇಂತಹ ಆರ್ಡರ್ಗಳನ್ನ ಗ್ರಾಹಕರಿಗೆ ತಲುಪಿಸಲು ಜೊಮ್ಯಾಟೋ ಪ್ರಯತ್ನ ಮಾಡಲಿದೆ.
ಇನ್ನು ಇಂತಹ ಆರ್ಡರ್ಗಳಿಗೆ ಮೊದಲೇ ಹಣ ಪಾವತಿ ಮಾಡಬೇಕು. ಡೆಲಿವರಿ ಕೂಡ ಸಂಪರ್ಕರಹಿತವಾಗಿರಲಿದೆ. ಜೊಮ್ಯಾಟೋ ಜೊತೆ ಈ ಹೊಸ ಸೌಲಭ್ಯಕ್ಕೆ ಒಡಂಬಡಿಕೆ ಮಾಡಿಕೊಂಡ ರೆಸ್ಟಾರೆಂಟ್ಗಳ ಫುಡ್ಗೆ ಈ ಆಯ್ಕೆ ಲಭ್ಯವಿದೆ. ಈ ಆರ್ಡರ್ ಕೋವಿಡ್ 19 ತುರ್ತುಪರಿಸ್ಥಿತಿಯಾಗಿದೆ ಎಂಬ ಆಯ್ಕೆಯನ್ನ ನೀವು ಕ್ಲಿಕ್ ಮಾಡಿದ್ರೆ ನಿಮಗೆ ತುರ್ತಾಗಿ ಫುಡ್ ಬಂದು ತಲುಪಲಿದೆ.
ಅಂದಹಾಗೆ ಈ ವಿಶೇಷ ಡೆಲಿವರಿಗೆ ಹೆಚ್ಚಿನ ಶುಲ್ಕ ವಿಧಿಸೋದಿಲ್ಲ ಎಂದು ಜೊಮ್ಯಾಟೋ ಸ್ಪಷ್ಟನೆ ನೀಡಿದೆ. ಗ್ರಾಹಕರಿಗೆ ನಮ್ಮ ಅವಶ್ಯಕತೆ ಹೆಚ್ಚಿರುವ ಈ ಸಂದರ್ಭದಲ್ಲಿ ನಮ್ಮೊಡನೆ ಕೈಜೋಡಿಸಿದ ರೆಸ್ಟಾರೆಂಟ್ಗಳಿಗೆ ಧನ್ಯವಾದ ಎಂದು ಜೊಮ್ಯಾಟೋ ಹೇಳಿದೆ.
ಈ ಆಯ್ಕೆಯನ್ನ ಆಂಬುಲೆನ್ಸ್ ಸೇವೆ ಎಂದುಕೊಳ್ಳಿ. ಇದನ್ನ ದುರುದ್ದೇಶಕ್ಕೆ ಬಳಕೆ ಮಾಡಬೇಡಿ ಎಂದು ಗ್ರಾಹಕರಿಗೆ ಜೊಮ್ಯಾಟೋ ಮನವಿ ಮಾಡಿದೆ.