alex Certify 35 ವರ್ಷದ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ: ಹೆಲಿಕಾಪ್ಟರ್‌ ಮೂಲಕ ಮಗು ಕರೆ ತಂದು ಸಂಭ್ರಮಿಸಿದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

35 ವರ್ಷದ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ: ಹೆಲಿಕಾಪ್ಟರ್‌ ಮೂಲಕ ಮಗು ಕರೆ ತಂದು ಸಂಭ್ರಮಿಸಿದ ದಂಪತಿ

ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗುವ ಈ ಸಮಾಜದಲ್ಲಿ ರಾಜಸ್ಥಾನದ ಕುಟುಂಬವೊಂದು ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ಭರ್ಜರಿ ಸೆಲೆಬ್ರೇಷನ್​ ಮಾಡಿದ್ದು ಈ ಅದ್ದೂರಿ ಸಂಭ್ರಮದ ಮೂಲಕವೇ ಸುದ್ದಿಯಾಗಿದೆ.

ಬರೋಬ್ಬರಿ 35 ವರ್ಷಗಳ ಬಳಿಕ ಈ ಕುಟುಂಬಕ್ಕೆ ಹೆಣ್ಣುಮಗುವಿನ ಆಗಮನವಾಗಿದೆ. ಹೀಗಾಗಿ ಮಗುವನ್ನ ನಾಗಪುರ ಜಿಲ್ಲೆಯಿಂದ ತಮ್ಮ ಹಳ್ಳಿಗೆ ಹೆಲಿಕಾಪ್ಟರ್​ ಮೂಲಕ ಕೊಂಡೊಯ್ದಿದ್ದಾರೆ. ಈ ಸಂಭ್ರಮಕ್ಕಾಗಿ ಕುಟುಂಬ ಬರೋಬ್ಬರಿ 4.5 ಲಕ್ಷ ರೂಪಾಯಿ ಖರ್ಚು ಮಾಡಿದೆ.

ನಿಂಬ್ಡಿ ಚಂದವಟಾ ಗ್ರಾಮಸ್ಥರು ಹೆಣ್ಣು ಮಗುವಿನ ಅದ್ಧೂರಿ ಸ್ವಾಗತವನ್ನ ಕಣ್ತುಂಬಿಕೊಂಡಿದ್ದಾರೆ. ರಿಯಾ ಎಂಬ ಮಗು 2 ತಿಂಗಳ ಹಿಂದೆ ಜನಿಸಿದ್ದು ತನ್ನ ತಾಯಿಯ ಮನೆಯಲ್ಲಿತ್ತು. ಇದೀಗ ತಂದೆ ಮನೆಗೆ ಮಗು ವಾಪಸ್ಸಾಗಿದ್ದು ಈ ಎಂಟ್ರಿಯನ್ನ ಅದ್ದೂರಿಯಾಗಿ ಸಂಭ್ರಮಿಸಲಾಗಿದೆ.

ರಾಮನವಮಿ ದಿನ ಮಗು ತಂದೆಯ ಮನೆಗೆ ಪ್ರವೇಶ ಮಾಡಿದ್ದು ಪುಷ್ಪದೋಕುಳಿ ಮೂಲಕ ತಾಯಿ ಹಾಗೂ ಮಗುವನ್ನ ಗ್ರಾಮಕ್ಕೆ ಬರ ಮಾಡಿಕೊಳ್ಳಲಾಗಿದೆ.

ಮದನ್​ ಲಾಲ್​ ಕುಮಾರ್​ ಕುಟುಂಬ ಕಳೆದ 35 ವರ್ಷಗಳಿಂದ ಹೆಣ್ಣು ಮಗುವನ್ನೇ ಹೊಂದಿರಲಿಲ್ಲ. ಪ್ರತಿ ಬಾರಿ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿರ್ತಿದ್ದ ಕುಟುಂಬಕ್ಕೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದ ಮದನ್​ ಲಾಲ್​ ಕುಟುಂಬ ಇಷ್ಟು ಅದ್ಧೂರಿಯಾಗಿ ಮಗುವನ್ನ ಮನೆಗೆ ಬರ ಮಾಡಿಕೊಂಡಿದೆ.

ಎರಡು ಗ್ರಾಮದ ನಡುವೆ 30 ಕಿಲೋಮೀಟರ್​ ಅಂತರವಿದ್ದು ಚಾಪರ್​ನಲ್ಲಿ 20 ನಿಮಿಷಗಳ ಪ್ರಯಾಣದಲ್ಲಿ ಮಗು ತಂದೆ ಮನೆಗೆ ಬಂದಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ರಿಯಾ ತಂದೆ ಹನುಮಾನ್​ ರಾಮ್​ ಪ್ರಜಾಪತ್​, ಹೆಣ್ಣು ಮಗುವಿನ ಜನನವನ್ನ ಪ್ರತಿ ಮನೆಯೂ ಇದೇ ರೀತಿ ಹಬ್ಬದಂತೆ ಸಂಭ್ರಮಿಸುವಂತಾಗಬೇಕು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...