alex Certify ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ: ಬ್ಯಾಂಕಿಂಗ್​ ಅವಧಿ ಕೇವಲ 4 ಗಂಟೆ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ: ಬ್ಯಾಂಕಿಂಗ್​ ಅವಧಿ ಕೇವಲ 4 ಗಂಟೆ ನಿಗದಿ

ಉತ್ತರ ಪ್ರದೇಶದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಕ್ರಮಗಳನ್ನ ಕೈಗೊಂಡಿರುವ ಉತ್ತರ ಪ್ರದೇಶದಲ್ಲಿ ಇದೀಗ ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಎಸ್​ಎಲ್​ಬಿಸಿ ಆದೇಶದಂತೆ ಉತ್ತರ ಪ್ರದೇಶದಲ್ಲಿ ಮೇ 15ರವರೆಗೆ ಬ್ಯಾಂಕ್​ಗಳು ಕೇವಲ 4 ಗಂಟೆಗಳ ಕಾಲ ಮಾತ್ರ ಸಾರ್ವಜನಿಕರಿಗೆ ಸೇವೆ ನೀಡಲಿವೆ.

ಈ ಹೊಸ ಆದೇಶದ ಅನ್ವಯ ಬ್ಯಾಂಕ್​ಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ. ಆದರೆ ಬ್ಯಾಂಕ್​ ಸಿಬ್ಬಂದಿ 4 ಗಂಟೆಯವರೆಗೆ ಕಚೇರಿಯಲ್ಲೇ ಇರಬೇಕು ಎಂದು ಹೇಳಿದೆ.

ಕೊರೊನಾ ಪರಿಸ್ಥಿತಿಯನ್ನ ನೋಡಿಕೊಂಡು ಈ ಆದೇಶವನ್ನ ಮೇ 15ರ ಬಳಿಕ ಮುಂದುವರಿಸಬೇಕೋ ಬೇಡವೋ ಅನ್ನೋದ್ರ ಬಗ್ಗೆ ನಿರ್ಧರಿಸೋದಾಗಿ ಹೇಳಲಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ಸ್ ಯೂನಿಯನ್ ವಕ್ತಾರ ಅನಿಲ್​ ತಿವಾರಿ, ಪ್ರತಿದಿನ ಬ್ಯಾಂಕ್​ನಲ್ಲಿ 50 ಪ್ರತಿಶತ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ. ಈ ಹೊಸ ಆದೇಶವು ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್​ಗಳಿಗೆ ಗುರುವಾರದಿಂದಲೇ ಅನ್ವಯವಾಗಲಿದೆ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...