ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಕರಾವಳಿಯಲ್ಲಿ 271 ಕೆಜಿ ತೂಕದ ಬೃಹತ್ ಟ್ಯೂನಾ ಮೀನು ಮೀನುಗಾರರ ಕೈಗೆ ಸಿಕ್ಕಿಬಿದ್ದಿದೆ. ಅದು ದಾಖಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಬಹುದೆಂಬ ಚರ್ಚೆ ನಡೆದಿದೆ.
148 ಕೆಜಿ ಮತ್ತು 185 ಸೆಂ.ಮೀ ಉದ್ದದ ಟ್ಯೂನಾ ತಳಿಯ ಮೀನು ಸ್ಥಳೀಯವಾಗಿ ಈ ಹಿಂದೆ ಸಿಕ್ಕಿತ್ತು. ಇದೀಗ ಈ ದಾಖಲೆ ಮುರಿಯುವ ಸಾಧ್ಯತೆ ಇದೆ.
ಕೋವಿಡ್ ಆರೈಕೆ ಕೇಂದ್ರದಲ್ಲಿ ಆಘಾತಕಾರಿ ಘಟನೆ: ಸರಿಯಾಗಿ ಚಿಕಿತ್ಸೆ ನೀಡದ ನರ್ಸ್ ಗೆ ಚಾಕುವಿನಿಂದ ಇರಿದ ಸೋಂಕಿತ
ಟ್ಯೂನಾ ಆಕಾರದಲ್ಲಿ ದೈತ್ಯವಾಗಿದ್ದು ಅಳಿವಿನಂಚಿನಲ್ಲಿದೆ ಎಂಬ ಮಾತಿದೆ. ಈ ಬೃಹತ್ ಮೀನನ್ನು ಕಾಫ್ಸ್ ಹಾರ್ಬರ್ ಬಳಿ ಲಾಂಗ್‌ಲೈನರ್ ಹಡಗಿನಿಂದ ಹಿಡಿಯಲಾಯಿತು. ಮಾಹಿತಿಯ ಪ್ರಕಾರ ಮೀನನ್ನು ಕ್ಲಾಡಿಯೊ ಸೀಫುಡ್‌ಗೆ ಮಾರಾಟ ಮಾಡಲಾಗಿದೆ, ಇದು ಸಿಡ್ನಿಯಲ್ಲಿನ ಬಹಳಷ್ಟು ಜಪಾನೀಸ್ ರೆಸ್ಟೋರೆಂಟ್‌ಗಳಿಗೆ ಆಹಾರ ಪೂರೈಸಲು ಸಹಾಯ ಮಾಡುತ್ತದೆ.