ಬಿಪಿಎಲ್ ಕಾರ್ಡ್ ದಾರರಿಗೆ 5 ಕೆಜಿ ಬದಲು ಎರಡು ಕೆಜಿ ಅಕ್ಕಿ ನೀಡಲಾಗುವುದು. ಈ ಮೂಲಕ ಅನ್ನಭಾಗ್ಯ ಯೋಜನೆ ಅಕ್ಕಿ ಪ್ರಮಾಣವನ್ನು ಮತ್ತೆ ಕಡಿತ ಮಾಡಲಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬದ ಸದಸ್ಯರಿಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ನೀಡಲಾಗುತ್ತಿತ್ತು. ಈಗ ಎರಡು ಕೆಜಿ ಅಕ್ಕಿ, 3 ಕೆಜಿ ರಾಗಿ, 2 ಕೆಜಿ ಗೋಧಿ ನೀಡಲಾಗುವುದು. ಅಂತ್ಯೋದಯ ಅನ್ನ ಯೋಜನೆಯ ಕಾರ್ಡದಾರರಿಗೆ 15 ಕೆಜಿ ಅಕ್ಕಿ, 20 ಕೆಜಿ ರಾಗಿ ಕೊಡಲಾಗುತ್ತದೆ.
ರಾಗಿಯನ್ನು ಕಡ್ಡಾಯವಾಗಿ ಕೊಡುವುದಾದರೆ ಅಕ್ಕಿ ಪ್ರಮಾಣ ಮೊದಲಿನಂತೆಯೇ ಇರಲಿ. ಅಕ್ಕಿಯನ್ನು ಕಡಿತಗೊಳಿಸಬಾರಹುದು ಎನ್ನುವ ಅಭಿಪ್ರಾಯ ಕೇಳಿಬಂದಿದೆ.
ರಾಗಿ, ಜೋಳ ಬೆಳೆಯುವ ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ರೈತರಿಂದ ರಾಗಿ, ಜೋಳ ಖರೀದಿಸಿ ಪಡಿತರ ವ್ಯವಸ್ಥೆಯಡಿ ಹಂಚಿಕೆ ಮಾಡಲಿದೆ. ಆದರೆ, ಅಕ್ಕಿ ಕಡಿತಗೊಳಿಸಿರುವ ಕುರಿತು ವಿರೋಧ ವ್ಯಕ್ತವಾಗಿದೆ. ಭತ್ತ ಬೆಳೆಯುವ ರೈತರನ್ನು ಕಡೆಗಣಿಸಿದಂತಾಗುತ್ತದೆ ಎಂದು ಹೇಳಲಾಗಿದೆ.