ಬೆಂಗಳೂರು: ಸರ್ಕಾರಿ ನೌಕರರ ಕೋವಿಡ್ ಚಿಕಿತ್ಸಾ ವೆಚ್ಚ ಮರುಪಾವತಿಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಕೋವಿಡ್ ಸೋಂಕಿತ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸಾ ವೆಚ್ಚ ಮರುಪಾವತಿ ಮಾಡಲು ಪ್ಯಾಕೇಜ್ ದರ ಪ್ರಕಟಿಸಲಾಗಿದೆ.
ಸಾಮಾನ್ಯ ವಾರ್ಡ್ ಗೆ ದಿನಕ್ಕೆ 10 ಸಾವಿರ ರೂಪಾಯಿ, ಹೆಚ್ಚು ಅವಲಂಬಿತ ಘಟಕಕ್ಕೆ 12,000 ರೂ., ವೆಂಟಿಲೇಟರ್ ರಹಿತ ಐಸಿಯು ವಾರ್ಡ್ ಗೆ 15,000 ರೂ., ವೆಂಟಿಲೇಟರ್ ಸಹಿತ ಐಸಿಯುಗೆ 25,000 ರೂ. ನಿಗದಿ ಮಾಡಲಾಗಿದೆ.
ಪ್ಯಾಕೇಜ್ ದರದಲ್ಲಿ ಸರ್ಕಾರಿ ನೌಕರರು, ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚ ಮರುಪಾವತಿಸಲು ಸೂಚಿಸಿದೆ. ಚಿಕಿತ್ಸೆ ದರ ಸರ್ಕಾರ ನಿಗದಿಪಡಿಸಿದ ಪ್ಯಾಕೆಜ್ ದರಕ್ಕಿಂತ ಕಡಿಮೆ ಇದ್ದರೆ ಯಾವುದು ಕಡಿಮೆಯೋ ಅದರ ಆಧಾರದಲ್ಲಿ ಚಿಕಿತ್ಸೆಯ ವೆಚ್ಚ ಮರುಪಾವತಿಸುವಂತೆ ತಿಳಿಸಲಾಗಿದೆ.