alex Certify ‘ಕೊರೊನಾ’ದ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ದ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ

ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಸ್ತುತ ಸಕ್ರಿಯ ಪ್ರಕರಣಗಳಿಗೆ ಬೇಕಾದಷ್ಟು ಆಸ್ಪತ್ರೆಗಳಲ್ಲಿ ಬೆಡ್​ ಸೌಕರ್ಯಗಳಿಲ್ಲದ ಕಾರಣ ಸಂಕಷ್ಟದ ವಾತಾವರಣ ನಿರ್ಮಾಣವಾಗಿದೆ.

ಆದರೆ ಕೊರೊನಾ ಸೋಂಕು ಬಂದಿದೆ ಎಂದಾಕ್ಷಣ ಆಸ್ಪತ್ರೆಗೆ ದಾಖಲಾಗಲೇಬೇಕು ಎಂದೇನಿಲ್ಲ. ಅನೇಕ ಬಾರಿ ನೀವು ಈ ಸೋಂಕನ್ನ ಮನೆಯಲ್ಲೇ ಕಡಿಮೆ ಮಾಡಿಕೊಳ್ಳಬಹುದಾಗಿದೆ. ವೈದ್ಯರ ಸಲಹೆಯಂತೆ ನೀವು ಹೋಂ ಕ್ವಾರಂಟೈನ್​ ಮೂಲಕವೇ ಡೆಡ್ಲಿ ವೈರಸ್​ನಿಂದ ಪಾರಾಗಬಹುದು.

ಕೊರೊನಾದಿಂದ ಯಾರು ಗಂಭೀರ ಸ್ಥಿತಿಯಲ್ಲಿ ಇರ್ತಾರೋ ಅವರು ಮಾತ್ರ ತುರ್ತಾಗಿ ಆಸ್ಪತ್ರೆಗೆ ದಾಖಲಾಗಬೇಕು. ಈ ಕೆಳಗಿನ ಲಕ್ಷಣಗಳು ಗೋಚರಿಸಿದಲ್ಲಿ ಮಾತ್ರ ನೀವು ಕೂಡಲೇ ಆಸ್ಪತ್ರೆಗೆ ದಾಖಲಾಗೋದು ಒಳ್ಳೆಯದು.

ನಿಮ್ಮ ದೇಹದ ಆಮ್ಲಜನಕ ಮಟ್ಟ 90 ಪ್ರತಿಶತಕ್ಕಿಂತ ಕಡಿಮೆ ಇದ್ದಲ್ಲಿ ನೀವು ಆಸ್ಪತ್ರೆಗೆ ದಾಖಲಾಗಬೇಕು. ಈ ರೀತಿ ಆದಾಗ ನಿಮಗೆ ಉಸಿರಾಟದ ತೊಂದರೆ, ಮಾತನಾಡಲು ಕಷ್ಟವಾಗೋದು, ನಡೆದಾಡಲು ತುಂಬಾನೇ ಕಷ್ಟ ಎನಿಸುತ್ತೆ. ಇಂತಹ ಸಂದರ್ಭದಲ್ಲಿ ತುರ್ತಾಗಿ ನೀವು ಆಸ್ಪತ್ರೆಗೆ ದಾಖಲಾಗೋದು ಒಳಿತು.

ಕೊರೊನಾ ವೈರಸ್​ ಬಂದಾಗ ಜ್ವರ ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ ಜ್ವರ 5 ದಿನ ಕಳೆದರೂ ವಾಸಿಯಾಗೋ ಲಕ್ಷಣ ಕಾಣುತ್ತಿಲ್ಲ ಅಂದರೆ ಆಸ್ಪತ್ರೆಗೆ ದಾಖಲಾಗಿ.

ಅತಿಯಾದ ವಾಂತಿ ಹಾಗೂ ಅತಿಸಾರ. ಈ ಲಕ್ಷಣಗಳು ವಿಪರೀತವಾಗಿ ಕಾಣಿಸಿಕೊಂಡಲ್ಲಿ ನಿಮ್ಮ ದೇಹದಲ್ಲಿ ಅವಶ್ಯವಾದ ದ್ರಾವಣ ಪ್ರಮಾಣ ಕಡಿಮೆಯಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ದೇಹಕ್ಕೆ ಇಂಜೆಕ್ಷನ್​ ಅವಶ್ಯಕತೆ ಇದೆ ಎಂದರ್ಥ.

ಮಾತನಾಡಲೂ ಆಗ್ತಿಲ್ಲ ಅಂದರೆ ಇದು ಕೊರೊನಾ ಗಂಭೀರ ಲಕ್ಷಣಗಳಲ್ಲಿ ಒಂದಾಗಿದೆ.

ಕೊರೊನಾ ರೋಗಿ ಮಾನಸಿಕ ಸ್ಥಿಮಿತ ಕಳೆದು ಹೋಗುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ ತತ್​ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿ.

ಅತಿಯಾದ ನಿದ್ರೆ ಅಥವಾ ಎಚ್ಚರವಾಗದೇ ಇರೋದು. ಈ ರೀತಿಯ ಲಕ್ಷಣಗಳಿದ್ದರೂ ಸಹ ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...