ಕೊರೊನಾ ವೈರಸ್ ವಿರುದ್ಧ ಕಳೆದೊಂದು ವರ್ಷದಿಂದ ಹೋರಾಡುತ್ತಲೇ ಇರುವ ದೇಶ ಇದೀಗ ಕೊರೊನಾ ಲಸಿಕೆಯ ಅಸ್ತ್ರವನ್ನ ಬಳಸುತ್ತಿದೆ. ಆದರೆ ದೇಶದ ಬಹುತೇಕ ರಾಜ್ಯಗಳಲ್ಲಿ ಲಸಿಕೆಯ ಅಭಾವ ಕಂಡು ಬರ್ತಾ ಇರೋದು ಕೋವಿಡ್ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಉಂಟುಮಾಡ್ತಿದೆ.
ಪ್ರಸ್ತುತ ದೇಶದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನ ನೀಡಲಾಗ್ತಿದೆ. ಹಾಗೂ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನ ನೀಡೋದಾಗಿ ಕೇಂದ್ರ ಸರ್ಕಾರ ಹೇಳಿದೆ.
ಕೊರೊನಾ ಲಸಿಕೆ ಅಭಾವವಾದ ವಿಚಾರವಾಗಿ ಅಭಿಪ್ರಾಯವನ್ನ ಹಂಚಿಕೊಂಡಿರುವ ತಜ್ಞರು ತೀರಾ ಇತ್ತೀಚಿಗೆ ಕೊರೊನಾ ವೈರಸ್ನಿಂದ ಗುಣಮುಖರಾದವರು ಲಸಿಕೆಯನ್ನ ಪಡೆದುಕೊಳ್ಳಲು ಗಡಿಬಿಡಿ ಮಾಡಬೇಡಿ ಎಂದು ಹೇಳಿದ್ದಾರೆ.
ಇಂತವರ ದೇಹದಲ್ಲಿ ಆಂಟಿಬಾಡಿಗಳು ಅಭಿವೃದ್ಧಿ ಹೊಂದಿರೋದ್ರಿಂದ ಲಸಿಕೆಯ ಅಗತ್ಯ ಶೀಘ್ರದಲ್ಲೇ ಇರೋದಿಲ್ಲ. ಈ ರೀತಿ ಮಾಡೋದ್ರಿಂದ ನಿಜವಾಗಿಯೂ ಲಸಿಕೆಯ ಅಗತ್ಯ ಇರುವ ಜನರಿಗೆ ಅವಕಾಶ ಸಿಕ್ಕಂತಾಗುತ್ತೆ ಎಂದು ಹೇಳಿದ್ದಾರೆ.
ಕೊರೊನಾದಿಂದ ಗುಣಮುಖರಾದವರಲ್ಲಿ ಮುಂದಿನ 6-9 ತಿಂಗಳುಗಳ ಕಾಲ ಅವರ ದೇಹದಲ್ಲಿ ಆಂಟಿಬಾಡಿಗಳು ಇರುತ್ತವೆ. ಹೀಗಾಗಿ ಕೊರೊನಾ ಲಸಿಕೆಯ ಅಭಾವ ಇರುವ ಈ ಸಂದರ್ಭದಲ್ಲಿ ಇಂತವರು ಲಸಿಕೆಗಾಗಿ ಅವಸರ ಮಾಡೋದು ಬೇಡ. ಲಭ್ಯ ಇರುವ ಕಡಿಮೆ ಪ್ರಮಾಣದ ಲಸಿಕೆಗಳು ಅವಶ್ಯ ಇರುವವರಿಗೆ ಹಂಚಿಕೆಯಾಗಲಿ. ದೇಶದ ಪ್ರಸ್ತುತ ಪರಿಸ್ಥಿತಿಯನ್ನ ನೋಡ್ತಿದ್ರೆ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕೊಚ್ಚಿ ಮೂಲದ ಶ್ವಾಸಕೋಶ ತಜ್ಞ ಡಾ. ಮೋನು ವರ್ಗೀಸ್ ಹೇಳಿದ್ದಾರೆ .