ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಣಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ 6 ದಿನ ಲಾಕ್ ಡೌನ್ ಘೋಷಿಸಿದೆ.
ಸೋಮವಾರ ರಾತ್ರಿಯಿಂದಲೇ ದೆಹಲಿಯಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಮದ್ಯಪ್ರಿಯರು ಮದ್ಯ ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದಿವೆ. ದೆಹಲಿಯಲ್ಲಿ ಪರಿಸ್ಥಿತಿ ಕೈ ಮೀರಿದ್ದು, ಸೋಂಕು ತಡೆಗೆ ಲಾಕ್ಡೌನ್ ಜಾರಿಮಾಡಲಾಗಿದೆ.
ಸಿಎಂ ಕೇಜ್ರಿವಾಲ್ ಅವರು, ಇದು ಸಣ್ಣ ಪ್ರಮಾಣದ ಲಾಕ್ ಡೌನ್ ಆಗಿದ್ದು, ವಲಸೆ ಕಾರ್ಮಿಕರು ದೆಹಲಿ ಬಿಟ್ಟು ಹೋಗಬೇಡಿ. ಎಲ್ಲಾ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮನವಿ ಮಾಡಿದ್ದಾರೆ. ಅಂಗಡಿ, ಮೆಡಿಕಲ್ ಸ್ಟೋರ್, ದಿನಪತ್ರಿಕೆ ಮಾರಾಟ, ಬ್ಯಾಂಕ್, ಎಟಿಎಂ, ಕಚೇರಿ ತೆರೆದಿರುತ್ತವೆ ಎಂದು ಅವರು ತಿಳಿಸಿದ್ದಾರೆ. ಆದರೆ, ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಮದ್ಯಪ್ರಿಯರು ಮದ್ಯ ಖರೀದಿಗೆ ಮುಗಿಬಿದ್ದ ಘಟನೆಯೂ ನಡೆದಿದೆ.