alex Certify ಗಮನಿಸಿ: ಈ ಸಮಸ್ಯೆಗಳನ್ನ ಹೊಂದಿರುವವರಿಗೆ ಕೊರೊನಾ ಅಪಾಯ ಹೆಚ್ಚು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಈ ಸಮಸ್ಯೆಗಳನ್ನ ಹೊಂದಿರುವವರಿಗೆ ಕೊರೊನಾ ಅಪಾಯ ಹೆಚ್ಚು…..!

ಕೊರೊನಾ ವೈರಸ್​ ಮಹಾಮಾರಿ ಸಂಪೂರ್ಣ ದೇಶದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಕೇಂದ್ರ ಸರ್ಕಾರ ಕೊರೊನಾ ವಿರುದ್ಧದ ಜಾಗೃತಿಗಾಗಿ ವಿವಿಧ ಕ್ರಮಗಳನ್ನ ಕೈಗೊಳ್ಳುತ್ತಲೇ ಇದೆ.  ಕೇಂದ್ರ ಸರ್ಕಾರದ #IndiaFightsCorona ಎಂಬ ಟ್ವಿಟರ್​ ಖಾತೆಯಲ್ಲಿ ಜನರಲ್ಲಿ ಕೊರೊನಾದ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿಯನ್ನ ನೀಡಲಾಗ್ತಿದೆ. ಧೂಮಪಾನದಂತಹ ಕೆಟ್ಟ ಅಭ್ಯಾಸಗಳು ಹೃದಯ ಹಾಗೂ ಉಸಿರಾಟ ಸಂಬಂಧಿ ಕಾಯಿಲೆಗಳನ್ನ ಹೆಚ್ಚು ಮಾಡಬಹುದು. ಕೇಂದ್ರ ಸರ್ಕಾರವು ಟ್ವಿಟರ್​ ಖಾತೆಯ ಸಹಾಯದಿಂದ ಜನರಿಗೆ ಕೊರೊನಾ ಗೈಡ್​ಲೈನ್​ ನೀಡುತ್ತಿದೆ.

ಯಾರ ವಯಸ್ಸು 60 ವರ್ಷಕ್ಕೂ ಮೀರಿದೆಯೋ ಅವರಿಗೆ ಕೊರೊನಾ ವೈರಸ್​ನ ಅಪಾಯ ಅತಿಯಾಗಿರುತ್ತೆ. ಇವರು ಕೊರೊನಾ ವೈರಸ್​​​ನಂತಹ ಗಂಭೀರ ಕಾಯಿಲೆಯಿಂದ ಎಚ್ಚರ ವಹಿಸಿದಷ್ಟೂ ಒಳ್ಳೆಯದು.

ಡಬ್ಲುಹೆಚ್​ಒ ನೀಡಿರುವ ಮಾಹಿತಿಯ ಪ್ರಕಾರ ತಂಬಾಕು ಸೇವನೆ ಯಾರು ಅತಿಯಾಗಿ ಮಾಡುತ್ತಾರೋ ಅವರಿಗೆ ಕೊರೊನಾ ಅಪಾಯ ಹೆಚ್ಚು. ಜನವರಿಯಲ್ಲಿ ಕಿಂಗ್ಸ್ ಕಾಲೇಜು ಲಂಡನ್​ನಲ್ಲಿ ನಡೆಸಲಾದ ಅಧ್ಯಯನದಲ್ಲಿ ಧೂಮಪಾನ ಮಾಡದೇ ಇರುವವರಿಗಿಂತ ಧೂಮಪಾನ ಅಭ್ಯಾಸ ಇರುವವರೇ ಕೊರೊನಾ ಸೋಂಕಿಗೆ ಅತಿ ಹೆಚ್ಚು ತುತ್ತಾಗಿದ್ದಾರೆ.

ನಾನ್​ ಕಮ್ಯೂನಿಕೇಬಲ್​ ಡಿಸೀಸ್​​ ಕೂಡ ವ್ಯಕ್ತಿಯಲ್ಲಿ ಕೊರೊನಾ ಅಪಾಯವನ್ನ ಹೆಚ್ಚಿಸಲು ಕಾರಣವಾಗುತ್ತೆ. ಹಾಗೂ ಇಂತಹವರಿಗೆ ಕೊರೊನಾದಿಂದ ಪಾರಾಗಲು ತುಂಬಾನೇ ಕಷ್ಟವಾಗುತ್ತೆ. ಕಾರ್ಡಿಯೋವ್ಯಾಸ್ಕುಲಾರ್​​ ಸಮಸ್ಯೆ ಉಳ್ಳವರಲ್ಲಿ ಹೃದಯಾಘಾತ ಆಗುವ ಅಪಾಯ ಹೆಚ್ಚು. ಡಬ್ಲುಹೆಚ್​ಒ ಪ್ರಕಾರ ಇಂತಹ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಕೊರೊನಾ ಅಪಾಯ 2.3 , 2.9 ಹಾಗೂ 3.9 ಪಟ್ಟು ಹೆಚ್ಚಾಗಿ ಇರಲಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...