ದೃಷ್ಟಿ ಭ್ರಮೆ ಅನ್ನೋದು ಕೆಲವೊಮ್ಮೆ ಎಷ್ಟು ಮಜವಾಗಿ ಇರುತ್ತೆ ಅಂದರೆ ವಾಸ್ತವ ಚಿತ್ರಣವನ್ನ ನಂಬಬೇಕು ಅಂತಾನೇ ಅನಿಸೋದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೃಷ್ಟಿ ಭ್ರಮೆಯ ವಿಡಿಯೋಗಳು ಹರಿದಾಡ್ತಾನೇ ಇರುತ್ತವೆ. ಇದೀಗ ಈ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು ಇದನ್ನ ನೋಡಿದ್ರೆ ನೀವು ನಿಮ್ಮ ಕಣ್ಣುಗಳನ್ನ ನಂಬಲಾರಿರಿ.
2019ರಲ್ಲಿ ಭಾರೀ ವೈರಲ್ ಆದ ದೃಷ್ಟಿ ಭ್ರಮೆ ವಿಡಿಯೋ ಇದಾಗಿದೆ. ಇದನ್ನ ಪಿನ್ನಾ-ಬ್ರೆಲ್ಸ್ಟಾಫ್ ಇಲ್ಯೂಷನ್ ಎಂದು ಕರೆಯಲಾಗುತ್ತೆ.
ಇದರಲ್ಲಿ ಎರಡು ವೃತ್ತಗಳು ಇರುತ್ತವೆ. ಮಧ್ಯದಲ್ಲಿ ನೀಲಿ ಬಣ್ಣದ ಚುಕ್ಕೆಯನ್ನ ಇಡಲಾಗಿದೆ.
ನಿಮಗೆ ಇಲ್ಲಿ ನೀಲಿ ಬಣ್ಣದ ಚುಕ್ಕೆಯನ್ನ ನೋಡುವಂತೆ ಹೇಳಲಾಗುತ್ತೆ. ಇದನ್ನ ನೋಡಿದಾಗ ನಿಮಗೆ ಒಳಗೆ ಹಾಗೂ ಹೊರಗಿರುವ ವೃತ್ತಗಳು ತಿರುಗುತ್ತಾ ಇರುವಂತೆ ಗೋಚರವಾಗುತ್ತೆ. ಆದರೆ ಇಲ್ಲಿ ಒಳಗಿರುವ ವೃತ್ತಿ ಸಂಚಾರ ಮಾಡುತ್ತಿಲ್ಲ.