ಪರೀಕ್ಷೆಗಳಿಂದ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಕಾಲೇಜುಗಳು ಕೊರೋನಾ ಹಾಟ್ ಸ್ಪಾಟ್ ಗಳಾಗಿವೆ.
ಕೊರೋನಾ ಇದ್ದರೂ ಡೋಂಟ್ ಕೇರ್ ಎಕ್ಸಾಮ್ ಬರೆಯಲೇಬೇಕಿದೆ. ಸದ್ಯದ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬೇಡವೆಂದು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದರೂ ವಿಟಿಯು ಪ್ರತಿಕ್ರಿಯೆ ನೀಡಿಲ್ಲ.
ಬೇರೆ ರಾಜ್ಯಗಳಿಂದ ವಿದ್ಯಾರ್ಥಿಗಳು ಕೊರೊನಾ ಸೋಂಕು ಹೊತ್ತು ತರುತ್ತಿರುವ ಆತಂಕ ಎದುರಾಗಿದೆ. ರಾಜ್ಯಾದ್ಯಂತ 40,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಬೆಂಗಳೂರಿನಲ್ಲಿ 15 ಸಾವಿರಕ್ಕೂ ಹೆಚ್ಚು ವಿಟಿಯು ವಿದ್ಯಾರ್ಥಿಗಳು ಇದ್ದಾರೆ. ಗುಜರಾತ್, ಮಹಾರಾಷ್ಟ್ರ, ಕೇರಳದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಾರೆ.
ವಿದ್ಯಾರ್ಥಿಗಳು ಎಷ್ಟೇ ಮನವಿ ಮಾಡಿದರೂ ವಿಟಿಯು ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ತೊಂದರೆಯಾಗುತ್ತದೆ ಎಂದು ವಿಟಿಯು ಹೇಳುತ್ತಿದ್ದು, ಪರೀಕ್ಷೆ ಯಾವುದೇ ಕಾರಣಕ್ಕೂ ಮುಂದೂಡಿಕೆ ಮಾಡಲ್ಲ. ಆಫ್ ಲೈನ್ ನಲ್ಲೇ ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿದ್ದು, ವಿಟಿಯು ಪರೀಕ್ಷೆ ಆರಂಭವಾದ್ರೆ ಕೊರೋನಾ ಭಾರೀ ಸ್ಪೋಟವಾಗಲಿದೆ ಎನ್ನಲಾಗಿದೆ.