ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಿಡುಗಡೆಯಾದಾಗಿನಿಂದ ಒಂದರ ಮೇಲೊಂದು ದಾಖಲೆ ಬರೆಯುತ್ತಲೇ ಇದೆ, ಈ ಚಿತ್ರ ಭರ್ಜರಿ ಕಲೆಕ್ಷನ್ ಕೂಡ ಮಾಡಿದ್ದು ಇದೀಗ ಮತ್ತೊಂದು ದಾಖಲೆ ಮಾಡಿದೆ. ಈ ಸಿನಿಮಾದ ಎಲ್ಲಾ ಹಾಡುಗಳು ಗಾನ ಪ್ರಿಯರ ಗಮನ ಸೆಳೆದಿವೆ.
ಈ ಚಿತ್ರದ ಹಾಡುಗಳಾದ ಜೈ ಶ್ರೀರಾಮ್,’ದೋಸ್ತಾ ಕಣೋ’, ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ, ಹಾಗೂ ಬಾ ಬಾ ಬಾ ನಾ ರೆಡಿ, ಕಣ್ಣು ಹೊಡಿಯಾಕ, ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿವೆ, ಅದರಲ್ಲೂ ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಮೂಡಿ ಬಂದಿರುವ ಕಣ್ಣು ಹೊಡಿಯಾಕ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿದೆ. ಇನ್ನು ತೆಲುಗಿನಲ್ಲಿ ಮಂಗ್ಲಿ ಹಾಡಿರುವ ‘ಕಣ್ಣೇ ಅದಿರಿಂದಿ’ ಹಾಡು ಎಲ್ಲರ ಬಾಯಲ್ಲಿ ನಲಿದಾಡುತ್ತಲೇ ಇದೆ. ಈ ಎಲ್ಲಾ ಹಾಡುಗಳು ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡು ಭರ್ಜರಿಯಾಗಿ ಮುನ್ನುಗ್ಗುತ್ತಿವೆ. ಈ ಮೂಲಕ ಮ್ಯೂಸಿಕಲ್ ಹಿಟ್ ಚಿತ್ರ ಎಂಬ ಹೊಸ ರೆಕಾರ್ಡ್ ಸೃಷ್ಟಿಸಿ ಮೊದಲ ಸ್ಥಾನ ಪಡೆದುಕೊಂಡಿದೆ, ಈ ಮೂಲಕ ರಾಬರ್ಟ್ ಸಿನಿಮಾ ಮತ್ತೊಂದು ಮೇಲುಗೈ ಸಾಧಿಸಿದೆ.
45ನೇ ವಸಂತಕ್ಕೆ ಕಾಲಿಟ್ಟ ನೆನಪಿರಲಿ ಪ್ರೇಮ್
ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸಿದ್ದು ವಿನೋದ್ ಪ್ರಭಾಕರ್, ಸೋನಾಲ್ ಮೊಂಥೈರೋ, ಜಗಪತಿ ಬಾಬು, ರವಿಶಂಕರ್, ಶಿವರಾಜ್ ಕೆ ಆರ್ ಪೇಟೆ, ರವಿಕಿಶನ್, ದೇವರಾಜ್, ಸೇರಿದಂತೆ ಮೊದಲಾದ ಕಲಾವಿದರು ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.
https://www.instagram.com/p/CNrjEubAX7Z/?utm_source=ig_web_copy_link