ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ನಕಾರಾತ್ಮಕತೆಯನ್ನು ಹೊರಹಾಕಲು ಆಸ್ಪತ್ರೆಯೊಂದರ ವೈದ್ಯರು ಹಾಡಿಗೆ ಹೆಜ್ಜೆ ಹಾಕಿ ರೋಗಿಗಳನ್ನೂ ಸಹ ಕುಳಿತಲ್ಲೇ ನೃತ್ಯ ಮಾಡುವಂತೆ ಪ್ರೇರೇಪಿಸಿರುವ ವಿಡಿಯೋ ವೈರಲ್ ಆಗಿದೆ.
ರೋಗಿಗಳಲ್ಲಿ ಭರವಸೆ ಮತ್ತು ನಂಬಿಕೆ- ವಿಶ್ವಾಸ ಮೂಡಿಸಲು ಕೋವಿಡ್ ವಾರ್ಡ್ನಲ್ಲಿ ವಡೊದರಾದ ವೈದ್ಯರ ಗುಂಪೊಂದು ನೃತ್ಯ ಮಾಡಿದೆ.
ಪಿಪಿಇ ಕಿಟ್ ಧರಿಸಿದ್ದ ಪರುಲ್ ಸೇವಾಶ್ರಮ ಆಸ್ಪತ್ರೆಯ ವೈದ್ಯರು, ನಟ ಸನ್ನಿ ಡಿಯೋಲ್ ಅಭಿನಯದ ‘ಘಾಯಲ್’ ಚಿತ್ರದಿಂದ ‘ಸೊಚ್ನಾ ಕ್ಯಾ ಜೋ ಭಿ ಹೊಗಾ ದೇಖಾ ಜಯೇಗಾ’ ಹಾಡಿಗೆ ಹೆಜ್ಜೆ ಹಾಕಿದರು.
SBI ಗ್ರಾಹಕರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ
ತಾವು ಕುಳಿತಲ್ಲೇ, ಮಲಗಿದಲ್ಲೇ ನೃತ್ಯ ಮಾಡುವಂತೆ ವೈದ್ಯರು ಪ್ರೇರೇಪಿಸಿದಾಗ ಅಲ್ಲಿದ್ದ ವೃದ್ಧ ರೋಗಿ ಸೇರಿದಂತೆ ಉಳಿದವರು ಖುಷಿಯಿಂದ ಕೈ ತಿರುಗಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ಈ ಸಾಂಕ್ರಾಮಿಕವು ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೇವಲ ರೋಗಿಗಳಲ್ಲದೆ, ಅವರಿಗೆ ಚಿಕಿತ್ಸೆ ನೀಡುವ ವೈದ್ಯರು ಕಷ್ಟಪಡುತ್ತಿದ್ದಾರೆ. ಆದರೂ, ವೈದ್ಯರು ಹೋರಾಡುತ್ತಿದ್ದಾರೆ.