ನವದೆಹಲಿ: ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ವಾಟ್ಸಾಪ್ ಬಳಕೆದಾರರ ಮಾಹಿತಿ ಅಸುರಕ್ಷಿತವಾಗಿದೆ ಎಂದು ಸೈಬರ್ ಭದ್ರತಾ ಸಂಸ್ಥೆ ಸೆರ್ಟ್ -ಇನ್ ತಿಳಿಸಿದೆ.
ವಾಟ್ಸಾಪ್ ನಲ್ಲಿ ಹಲವು ತಾಂತ್ರಿಕ ದೋಷಗಳಿದ್ದು, ಬಳಕೆದಾರರ ಮಾಹಿತಿ ಅಸುರಕ್ಷಿತವಾಗಿದೆ. ಇದರ ಬಗ್ಗೆ ಬಳಕೆದಾರರು ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗಿದೆ.
ದೇಶದ ಅತ್ಯುನ್ನತ ಸೈಬರ್ ಏಜೆನ್ಸಿಯಾಗಿರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್, ಸಿ.ಇ.ಆರ್.ಟಿ. -ಐಎನ್ ಈ ಬಗ್ಗೆ ಎಚ್ಚರಿಕೆ ನೀಡಿದೆ. ವಾಟ್ಸಾಪ್ ಮತ್ತು ವಾಟ್ಸಾಪ್ ಬ್ಯುಸಿನೆಸ್ ಆವೃತ್ತಿಗಳಲ್ಲಿ ದೋಷ ಪತ್ತೆ ಮಾಡಲಾಗಿದೆ.
ಹೊರಗಿನ ದಾಳಿಕೋರ ವಾಟ್ಸಾಪ್ ನಲ್ಲಿ ಸುಲಭವಾಗಿ ಪ್ರೋಗ್ರಾಮ್ ಮಾಡುವ ಮೂಲಕ ಬಳಕೆದಾರರ ಮಾಹಿತಿಯನ್ನು ದೋಚಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ. ಆಡಿಯೋ ಡಿಕೋಡಿಂಗ್ ಪೈಪ್ ಲೈನ್ ನಲ್ಲಿಯೂ ಸಮಸ್ಯೆಗಳು ಇವೆ. ಆಂಡ್ರಾಯ್ಡ್ ಆವೃತ್ತಿ ಮತ್ತು ಅದಕ್ಕೂ ಮೊದಲಿನ ಐಇಎಸ್, ವಾಟ್ಸಾಪ್, ವಾಟ್ಸಾಪ್ ಬ್ಯುಸಿನೆಸ್ ಆವೃತ್ತಿಗಳಲ್ಲಿ ಲೋಪ ಕಂಡು ಬಂದಿದೆ. ಸಾಫ್ಟ್ ವೇರ್ ನ ಇತ್ತೀಚಿನ ಆವೃತ್ತಿಗಳಲ್ಲಿ ಅಂಡ್ರಾಯಿಡ್ ಗೆ ಅನುಗುಣವಾಗಿ ಅಪ್ ಡೇಟ್ ಗಳನ್ನು ಕಂಪನಿ ಬಿಡುಗಡೆ ಮಾಡಿದ್ದು, ಇದರಲ್ಲಿ ದೋಷ ಪತ್ತೆ ಮಾಡಲಾಗಿದೆ ಎಂದು ಹೇಳಲಾಗಿದೆ.