ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿರುವ ಕಾಂಗ್ರೆಸ್, ರಾಜ್ಯಾದ್ಯಂತ ಬೆಡ್‌ಗಳು, ರೆಮ್ ಡಿಸಿವಿರ್, ICU, ಲಸಿಕೆ, ಆಸ್ಪತ್ರೆ, ಆಕ್ಸಿಜನ್ ಕೊರತೆಯಿಂದ ಹಾಹಾಕಾರವೆದ್ದಿದೆ. ಜನ ಬೀದಿ ಬೀದಿಗಳಲ್ಲಿ ನರಳಾಡಿ ಪ್ರಾಣ ಬಿಡುತ್ತಿದ್ದಾರೆ ಆದರೂ ಸರ್ಕಾರ ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮಾನ ಮುಚ್ಚಿಕೊಳ್ಳುವ ನಿಮ್ಮ ಸುಳ್ಳು ಜನರ ಪ್ರಾಣ ಉಳಿಸದು. ನಿಮ್ಮಿಂದ ರಾಜ್ಯ ಸ್ಮಶಾನವಾಗಿದೆ ಎಂದು ಸಚಿವ ಸಧಾಕರ್ ವಿರುದ್ಧ ಸರಣಿ ಟ್ವೀಟ್ ಮೂಲಕ ಗುಡುಗಿರುವ ಕಾಂಗ್ರೆಸ್, ಇದು ಸುಳ್ಳು ಹೇಳುತ್ತಾ ಆತ್ಮವಂಚನೆ ಮಾಡಿಕೊಂಡು ಕೂರುವ ಕಾಲವಲ್ಲ. ವಾಸ್ತವದ ಸತ್ಯ ಒಪ್ಪಿಕೊಂಡು ಗಂಭೀರವಾಗಿ ಚಿಂತಿಸಿ ಅಗತ್ಯ ಕ್ರಮ ಕೈಗೊಳ್ಳುವ ತುರ್ತು ಸಮಯ ಎಂದು ಹೇಳಿದೆ.
ʼಕೊರೊನಾʼದಿಂದಾಗಿ ಈ ರಾಜ್ಯಗಳ 10 ಹಾಗೂ 12 ನೇ ತರಗತಿ ಪರೀಕ್ಷೆಗಳು ರದ್ದು / ಮುಂದೂಡಿಕೆ
ಜನ ನರಳಿ ನರಳಿ ಸಾಯುತ್ತಿದ್ದಾರೆ, ನಿಮ್ಮ ಹೊಲಸು ಸುಳ್ಳುಗಳನ್ನು ಸ್ವಲ್ಪ ಸಮಯದವರೆಗಾದರೂ ಮುಂದೂಡಿ..! ಆಗಬೇಕಾದ ಕೆಲಸಗಳನ್ನು ಗಮನಿಸಿ ಎಂದು ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಆಕ್ಸಿಜನ್ ಸೇರಿದಂತೆ ಎಲ್ಲಾ ವೈದ್ಯಕೀಯ ವ್ಯವಸ್ಥೆಗಳ ಕೊರತೆಯಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಆದರೂ ಸರ್ಕಾರ ಹಾಗೂ ಸಚಿವರು ಸುಳ್ಳುಗಳನ್ನು ಹೇಳುತ್ತಾ ವೈಫಲ್ಯ ಮುಚ್ಚಿಕೊಳ್ಳುತ್ತಿದೆ ಎಂದು ಕಿಡಿಕಾರಿದೆ.