ಡೆಹ್ರಾಡೂನ್: ಉತ್ತರಾಖಂಡ್ ನ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 30 ಸಾಧುಗಳಲ್ಲಿ ಸೋಂಕು ತಗುಲಿದೆ. ಓರ್ವ ನಾಗಾಸಾಧು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ ನಾಲ್ಕುದಿನಗಳಿಂದ ಕುಂಭಮೇಳದಲ್ಲಿ ಭಾಗಿಯಾದ 1,700ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕುಂಭಮೇಳ ಸ್ಥಳದಲ್ಲಿ ವೈದ್ಯರ ತಂಡವೇ ಬೀಡುಬಿಟ್ಟಿದ್ದು, ಯಾತ್ರಿಗಳಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ.
ಕೊರೋನಾ ಕುರಿತಾದ ಮತ್ತೊಂದು ಶಾಕಿಂಗ್ ಮಾಹಿತಿ ಬಹಿರಂಗ: ಅಧ್ಯಯನದಲ್ಲಿ ಬಯಲಾಯ್ತು ಮಾಹಿತಿ -ಗಾಳಿಯಲ್ಲೂ ಹರಡುತ್ತೆ ಸೋಂಕು
ಕುಂಭಮೇಳದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕುಂಭಮೇಳ ಸಾಂಕೇತಿಕವಾಗಿ ಮಾತ್ರ ನಡೆಸುವಂತೆ ಪ್ರಧಾನಿ ಮೋದಿ ಜುನಾ ಅಖಾಡದ ಅವ್ದೇಶಾನಂದ ಗಿರಿ ಅವರಿಗೆ ಮನವಿ ಮಾಡಿದ್ದಾರೆ. ಈ ನಡುವೆ ಪ್ರಧಾನಿ ಮೋದಿ ಮನವಿ ಹಿನ್ನೆಲೆಯಲ್ಲಿ ಕುಂಭಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರದಂತೆ ಹಾಗೂ ಗುಂಪು ಗುಂಪಾಗಿ ನದಿಯಲ್ಲಿ ಸ್ನಾನ ಮಾಡದಂತೆ ಅವ್ದೇಶಾನಂದ ಗಿರಿ ಕೋರಿದ್ದಾರೆ.