ಮಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ವಾಟ್ಸಾಪ್ ನ್ಯೂ ವರ್ಷನ್ ಹೆಸರಲ್ಲಿ ಲಿಂಕ್ ಹರಿದಾಡಿದ್ದು ಇದನ್ನು ಒತ್ತಿದ್ದವರು ಪೇಚಿಗೆ ಸಿಲುಕಿದ್ದಾರೆ.
ಪಿಂಕ್ ಬಣ್ಣದ ಸಿಂಬಲ್ ನೊಂದಿಗೆ ಪಿಂಕ್ ವಾಟ್ಸಾಪ್ ನ್ಯೂ ವರ್ಷನ್ ಹೆಸರಲ್ಲಿ ಲಿಂಕ್ ಹರಿದಾಡಿದೆ. ಈ ಲಿಂಕ್ ಒತ್ತಿದ ಕೂಡಲೆ ಈಗಾಗಲೇ ಸದಸ್ಯರಾಗಿರುವ ಗ್ರೂಪ್ ಗಳಿಗೆ ಮತ್ತು ವೈಯಕ್ತಿಕವಾಗಿ ಫಾರ್ವರ್ಡ್ ಆಗಿದೆ. ವಾಟ್ಸಾಪ್ ಹೊಸ ವರ್ಷನ್ ಬಂದಿರಬಹುದೆಂದು ಈ ಲಿಂಕ್ ಒತ್ತಿದ್ದವರು ಬೇಸ್ತು ಬಿದ್ದಿದ್ದಾರೆ.
ಇದೊಂದು ವೈರಸ್ ಲಿಂಕ್ ಆಗಿದ್ದು ಒಂದು ಸಲ ಒತ್ತಿದರೆ ಸಾವಿರಾರು ಮಂದಿಗೆ ಸೆಂಡ್, ಫಾರ್ವರ್ಡ್ ಆಗಿದೆ. ಬಹುತೇಕ ವಾಟ್ಸಾಪ್ ಗ್ರೂಪ್ ಗಳಲ್ಲಿ ಇಂತಹ ಸಂದೇಶಗಳು ಹರಿದಾಡಿದ್ದು, ಕ್ಲಿಕ್ ಮಾಡಿದವರ ಮೊಬೈಲ್ ನಿಂದ ಫಾರ್ವರ್ಡ್ ಆಗಿದೆ. ಇದರಿಂದಾಗಿ ಹಲವರು ಮುಜುಗರಕ್ಕೆ ಒಳಗಾಗಿದ್ದಾರೆ. ಸಂದೇಶ ಡಿಲಿಟ್ ಮಾಡುವಂತೆ ತಿಳಿಸಿದ್ದು, ಕೆಲವರಿಗೆ ಡಿಲಿಟ್ ಮಾಡಲು ಕೂಡ ಸಾಧ್ಯವಾಗಿಲ್ಲ. ಕೆಲವರು ಗ್ರೂಪ್ ಗಳಿಂದಲೇ ಹೊರ ಬಂದರೆ, ಮತ್ತೆ ಕೆಲವರು ಆಪ್ ಡಿಲಿಟ್ ಮಾಡಿಬಿಟ್ಟಿದ್ದಾರೆ.