ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ತೀವ್ರ ಏರಿಕೆ ಹಿನ್ನಲೆಯಲ್ಲಿ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆ ರದ್ದು ಮಾಡಿ 12ನೇ ತರಗತಿ ಪರೀಕ್ಷೆ ಮುಂದೂಡಲಾಗಿದೆ. ಅದೇ ರೀತಿ ಐಸಿಎಸ್ಇ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಡೂನ್ ಸ್ಕೂಲ್, ಕೊಡೈಕನಾಲ್ ಸೇರಿ ಖ್ಯಾತ ಶಾಲೆಗಳನ್ನು ನಡೆಸುವ ಇಂಟರ್ ನ್ಯಾಷನಲ್ ಬಕಾಲ್ಯುರಿಯೇಟ್(ಐಬಿ) ಮಂಡಳಿ ಭಾರತದಲ್ಲಿ 10 ನೇ ಮತ್ತು 12 ನೇ ತರಗತಿ ಪರೀಕ್ಷೆ ರದ್ದು ಮಾಡಲು ತೀರ್ಮಾನಿಸಿದೆ. ಜೊತೆಗೆ ಉದ್ಯೋಗ ಸಂಬಂಧಿತ ಕಾರ್ಯಕ್ರಮಗಳನ್ನು ರದ್ದು ಮಾಡಲಾಗುವುದು ಎಂದು ಹೇಳಲಾಗಿದೆ.
11 ರಿಂದ 16 ವರ್ಷದ ಮಕ್ಕಳಿಗೆ ನೀಡಲಾಗುವ ಶೈಕ್ಷಣಿಕ ತರಬೇತಿ –ಮಿಡಲ್ ಇಯರ್ಸ್ ಪ್ರೋಗ್ರಾಂಗೆ ಪರ್ಯಾಯವಾಗಿ ಟಾಸ್ಕ್ ನೀಡಲಾಗುವುದು. ಐಬಿ ಮಂಡಳಿ ವತಿಯಿಂದ ಈ ಕುರಿತಾಗಿ ಎಲ್ಲಾ ಶಾಲೆಗಳಿಗೆ ಅಧಿಕೃತ ಸೂಚನೆ ನೀಡಲಾಗಿದೆ ಎನ್ನಲಾಗಿದೆ.