ಬುಲಂದ್ ಶಹರ್: ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳೆ ಪ್ರಜ್ಞೆ ತಪ್ಪಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾನೆ.
5 ಲಕ್ಷ ರೂ. ಕೊಡುವಂತೆ ಬ್ಲಾಕ್ಮೇಲ್ ಮಾಡಿದ್ದು, ಇಲ್ಲದಿದ್ದರೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆದರೆ ಈ ಪ್ರಕರಣವನ್ನು ಅನುಮಾನಸ್ಪದವಾಗಿ ಪರಿಗಣಿಸಲಾಗಿದೆ.
ಬುಲಂದ್ ಶಹರ್ ನರಸೇನಾ ಪ್ರದೇಶದ ನಿವಾಸಿಯಾಗಿರುವ ದಿಗ್ವಿಜಯಸಿಂಗ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಪರಿಚಿತನಾಗಿದ್ದ ಆರೋಪಿ ಒಂದು ದಿನ ತನ್ನ ಮನೆಗೆ ಬಂದು ಮತ್ತು ಬರುವ ಆಹಾರ ಪದಾರ್ಥ ನೀಡಿದ್ದ. ಅದನ್ನು ಸೇವಿಸಿದ ನಂತರ ಪ್ರಜ್ಞೆ ತಪ್ಪಿದ ವೇಳೆಯಲ್ಲಿ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ 5 ಲಕ್ಷ ರೂ. ಕೇಳಿದ್ದಾನೆ. ವಿಡಿಯೋ ಬಹಿರಂಗವಾಗುವ ಭಯದಲ್ಲಿ ಮಹಿಳೆ ದೂರು ನೀಡಿದ್ದಾಳೆ. ತನಿಖೆ ನಡೆಸಲಾಗಿದೆ ಎಂದು ಸಿಟಿ ಕೊಟ್ವಾಲಿ ಠಾಣೆ ಠಾಣಾಧಿಕಾರಿ ಅಖಿಲೇಶ್ ತ್ರಿಪಾಠಿ ಹೇಳಿದ್ದಾರೆ.