ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ರೆಮ್ ಡಿಸಿವರ್ ಇಂಜೆಕ್ಷನ್ ಅಭಾವವನ್ನ ದೇಶ ಎದುರಿಸುತ್ತಿದ್ದರೆ ಇತ್ತ ಒಎಲ್ಎಕ್ಸ್ ವೆಬ್ಸೈಟ್ನಲ್ಲಿ ಈ ರೆಮ್ ಡಿಸಿವರ್ ಲಸಿಕೆಗಳನ್ನ ಮಾರಾಟಕ್ಕೆ ಇಡಲಾಗಿದೆ. ಗುಜರಾತ್ ಹಾಗೂ ಮಹಾರಾಷ್ಟ್ರ ಭಾಗದಿಂದ ಈ ರೆಮ್ ಡಿಸಿವರ್ ಲಸಿಕೆಗಳನ್ನ ಮಾರಾಟ ಮಾಡಲಾಗುತ್ತಿದೆ.
ಅನೇಕ ರಾಜ್ಯಗಳಲ್ಲಿ ಕೊರೊನಾ ಅಭಾವ ಎದುರಿಸುತ್ತಿರುವ ಈ ಸಮಯದಲ್ಲಿ ರೆಮ್ ಡಿಸಿವರ್ ಲಸಿಕೆಗಳನ್ನ ಪಡೆಯಲು ಜನರು ಔಷಧಾಲಯಗಳ ಮುಂದೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದರೆ ಇತ್ತ ಒಎಲ್ಎಕ್ಸ್ನಲ್ಲಿ ಪರಿಶೀಲನೆಯನ್ನೇ ಮಾಡದೇ ರೆಮ್ ಡಿಸಿವರ್ ಲಸಿಕೆಗಳನ್ನ ಮಾರಾಟಕ್ಕೆ ಇಡಲಾಗಿದೆ.
ಈಗಾಗಲೇ ಬ್ಲಾಕ್ ಮಾರ್ಕೆಟ್ಗಳಲ್ಲಿ ರೆಮ್ ಡಿಸಿವರ್ ಲಸಿಕೆ ಮಾರಾಟವಾಗ್ತಿರುವ ಬೆನ್ನಲ್ಲೇ ಇದೀಗ ಒಎಲ್ಎಕ್ಸ್ನಲ್ಲಿ ರೆಮ್ ಡಿಸಿವರ್ ಇಂಜೆಕ್ಷನ್ಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಈ ವೆಬ್ಸೈಟ್ನಲ್ಲಿ ರೆಮ್ ಡಿಸಿವರ್ ಇಂಜೆಕ್ಷನ್ಗಳನ್ನ 5000 ರಿಂದ 6000 ರೂಪಾಯಿಗೆ ಮಾರಾಟಕ್ಕೆ ಲಭ್ಯವಿದೆ. ಮಹಾರಾಷ್ಟ್ರದ ಮೂಲದ ವ್ಯಕ್ತಿ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಆದರೆ 100 ರೆಮ್ ಡಿಸಿವರ್ ಬಾಟಲಿಯ ಜಾಹಿರಾತನ್ನ ನೀಡಿದ್ದ ವ್ಯಕ್ತಿ ಒಂದು ಬಾಟಲಿಗೆ 1400 ರಿಂದ 1600 ರೂಪಾಯಿ ದರ ನಿಗದಿ ಮಾಡಿರೋದಾಗಿ ಹೇಳಿದ್ದಾನೆ. ಒಎಲ್ಎಕ್ಸ್ನಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗದ ವಸ್ತುಗಳ ಸಾಲಿನಲ್ಲಿ ಔಷಧಿಗಳೂ ಸೇರಿವೆ.