alex Certify BIG NEWS: ವಾರ್ಡ್ ಗೆ ಒಂದರಂತೆ ಆಂಬುಲೆನ್ಸ್; 5000 ಬೆಡ್ ಗಳ ವ್ಯವಸ್ಥೆ; ಕೋವಿಡ್ ನಿಯಂತ್ರಣಕ್ಕೆ ಸಜ್ಜಾದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾರ್ಡ್ ಗೆ ಒಂದರಂತೆ ಆಂಬುಲೆನ್ಸ್; 5000 ಬೆಡ್ ಗಳ ವ್ಯವಸ್ಥೆ; ಕೋವಿಡ್ ನಿಯಂತ್ರಣಕ್ಕೆ ಸಜ್ಜಾದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರದ ಬಗ್ಗೆ ಆರೋಗ್ಯ ಸಚಿವ ಡಾ.‌ ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಜೊತೆ ಜನರು ಸಹಕರಿಸಬೇಕು. ರೋಗ ಲಕ್ಷಣ ಇದ್ದರೆ ಶೀಘ್ರವೇ ಟೆಸ್ಟ್ ಮಾಡಿಸಿಕೊಳ್ಳಿ. ಟೆಸ್ಟ್ ಮಾಡಿದ 24 ಗಂಟೆಯಲ್ಲಿ ವರದಿ ನೀಡಬೇಕು. ಕೋವಿಡ್ ಟೆಸ್ಟ್ ಗೆ ಹೆಲ್ಪ್ ಲೈನ್ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದ್ದು, ಹೆಲ್ಪ್ ಲೈನ್ ನಲ್ಲಿ ಪರಿಣಿತರು ಕೆಲಸ ಮಾಡಲಿದ್ದಾರೆ. ಕಡ್ಡಾಯವಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಿದರು.

ಕೊರೊನಾ 2ನೇ ಅಲೆ: ಜನರ ಸಾವಿಗೆ ಕೇಂದ್ರ ಹಾಗೂ ರಾಜ್ಯದ ಸೋಂಕಿತ ಸರ್ಕಾರಗಳೇ ಕಾರಣ; ಕಾಂಗ್ರೆಸ್ ಕಿಡಿ

ಕೋವಿಡ್ ನಿಯಂತ್ರಣಕ್ಕೆ ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರಗಳು:

* ಅನಗತ್ಯ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. 100ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

* ನಗರಗಳಲ್ಲಿ ಮೈಕ್ರೋ ಕಂಟೇನ್ಮೆಂಟ್ ಝೋನ್ ಜಾರಿಯಾಗಲಿದೆ.

* ಹೊರಾಂಗಣದಲ್ಲಿ ಮದುವೆ, ಸಮಾರಂಭಗಳಿಗೆ 200 ಜನರಿಗೆ ಮಾತ್ರ ಅವಕಾಶ.

* ವಾರ್ಡ್ ಗೆ ಒಂದರಂತೆ ಆಂಬುಲೆನ್ಸ್ ವ್ಯವಸ್ಥೆ.

* ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಲ್ಲಿ 1000 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4300 ಬೆಡ್ ಸೇರಿ ಒಟ್ಟು 5000ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

* ಶೇ.50ರಷ್ಟು ಹಾಸಿಗೆಗಳು ಕೋವಿಡ್ ರೋಗಿಗಳಿಗೆ ಮೀಸಲು. ದೊಡ್ಡ ಆಸ್ಪತ್ರೆಗಳಲ್ಲಿ ಅಧಿಕಾರಿಗಳ ನೇಮಕ.

* ಐಪಿಎಸ್ ಅಧಿಕಾರಿಗಳಿಂದ ಹಿಡಿದು ನೋಡಲ್ ಅಧಿಕಾರಿಗಳು ದಿನದ 24 ಗಂಟೆ ಕಾರ್ಯನಿರ್ವಹಣೆಗೆ ತೀರ್ಮಾನ.

* 49 ಸ್ರದ್ಧಾಂಜಲಿ ಆಂಬುಲೆನ್ಸ್ ಉಚಿತ ವ್ಯವಸ್ಥೆ.

* ಜಿಲ್ಲಾಸ್ಪತ್ರೆಗಳಲ್ಲಿ ಟೆಂಡರ್ ಕರೆದು ಆಕ್ಸಿಜನ್ ಘಟಕ ತೆರೆಯಲು ನಿರ್ಧಾರ.

* 5000 ಆಕ್ಸಿಜನ್ ಸಿಲಿಂಡರ್ ಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...