alex Certify ಭಾನುವಾರ ಲಭ್ಯವಿರೋದಿಲ್ಲ RTGS​ ಸೇವೆ: ಬ್ಯಾಂಕ್​ ಗ್ರಾಹಕರಿಗೆ ಇಲ್ಲಿದೆ ಪ್ರಮುಖ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾನುವಾರ ಲಭ್ಯವಿರೋದಿಲ್ಲ RTGS​ ಸೇವೆ: ಬ್ಯಾಂಕ್​ ಗ್ರಾಹಕರಿಗೆ ಇಲ್ಲಿದೆ ಪ್ರಮುಖ ಮಾಹಿತಿ

ಆರ್​​ಟಿಜಿಸ್​ (Real Time Gross Settlement System) ಭಾನುವಾರ ಕನಿಷ್ಟ 14 ಗಂಟೆಗಳ ಕಾಲ ಲಭ್ಯವಿರೋದಿಲ್ಲ ಎಂದು ಸೋಮವಾರ ರಿಸರ್ವ್​ ಬ್ಯಾಂಕ್​ ಇಂಡಿಯಾ ಹೇಳಿತ್ತು. ಏಪ್ರಿಲ್​ 18ರಂದು ಮಧ್ಯರಾತ್ರಿ 12 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆರ್​ಟಿಜಿಎಸ್​ ಸೇವೆ ಲಭ್ಯವಿರೋದಿಲ್ಲ. ಆರ್ಟಿಜಿಎಸ್​ ತಂತ್ರಜ್ಞಾನ ಉನ್ನತೀಕರಣ ಮಾಡ್ತಿರೋದ್ರಿಂದ ಈ ಸೇವೆ ಲಭ್ಯವಿರೋದಿಲ್ಲ ಎಂದು ಹೇಳಿದೆ.

ಆರ್​ಟಿಜಿಎಸ್​​ ಸೇವೆ ಅಲಭ್ಯವಿರುವ ವೇಳೆ ಎನ್​ಇಎಫ್​ಟಿ ( National Electronic Funds Transfer) ಸೇವೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ಎಲ್ಲಾ ಗ್ರಾಹಕರಿಗೆ ಮಾಹಿತಿ ನೀಡೋದು ಆಯಾ ಬ್ಯಾಂಕ್​ಗಳ ಕರ್ತವ್ಯ ಎಂದೂ ಆರ್​ಬಿಐ ಸೂಚನೆ ನೀಡಿದೆ. ತಂತ್ರಜ್ಞಾನ ಉನ್ನತೀಕರಣ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆಯೇ ಆರ್​​ಟಿಜಿಎಸ್​ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಆರ್​ಬಿಐ ಹೇಳಿದೆ.

ಆರ್​ಬಿಐ ಕಳೆದ ವಾರ ಕೆಲ ಮಹತ್ವದ ಘೋಷಣೆಯನ್ನ ಮಾಡಿದ್ದು, ಇದರಲ್ಲಿ ಎನ್​​ಇಎಫ್​ಟಿ ಹಾಗೂ ಆರ್​ಟಿಜಿಎಸ್​ನ್ನು ನಾನ್​ಬ್ಯಾಂಕಿಂಗ್​ ವ್ಯಾಪ್ತಿಗೂ ವಿಸ್ತರಿಸಿದೆ. ಕೇಂದ್ರೀಕೃತ ಪಾವತಿ ವ್ಯವಸ್ಥೆ ಮೂಲಕ ಬ್ಯಾಂಕೇತರ ಸಂಸ್ಥೆಗಳೂ ಸಹ ಆರ್​​​ಟಿಜಿಎಸ್​ ಹಾಗೂ ಎನ್​ಇಎಫ್​ಟಿ ಮಾದರಿಯಲ್ಲಿ ವ್ಯವಹಾರ ನಡೆಸಬಹುದಾಗಿದೆ. ದೇಶದಲ್ಲಿ ಆರ್ಥಿಕ ವ್ಯವಸ್ಥೆ ಸುಧಾರಿಸಲು ಹಾಗೂ ಡಿಜಿಟಲ್​ ಬ್ಯಾಂಕಿಂಗ್​ಗೆ ಒತ್ತು ನೀಡುವ ಸಲುವಾಗಿ ಆರ್​ಬಿಐ ಈ ಕ್ರಮ ಕೈಗೊಂಡಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...