ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರವಾಸಿ ತಾಣಗಳು, ಐತಿಹಾಸಿಕ ದೇವಾಲಗಳನ್ನು ಬಂದ್ ಮಾಡಲಾಗುತ್ತಿದೆ.
ಹಾಸನ ಜಿಲ್ಲೆಯ ಬೇಲೂರು-ಹಳೆಬೀಡು, ಶ್ರವಣಬೆಳಗೊಳಕ್ಕೆ ಒಂದು ತಿಂಗಳು ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಮೇ 15ರವರೆಗೆ ಐತಿಹಾಸಿಕ ದೇವಾಲಯಗಳನ್ನು ಬಂದ್ ಮಾಡಿ ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕ ಎನ್.ಕೆ.ಪಾಟಕ್ ಆದೇಶ ಹೊರಡಿಸಿದ್ದಾರೆ.
ಗಮನಿಸಿ…! ಬಾರ್, ಚಿತ್ರಮಂದಿರಕ್ಕೆ ಬೀಗ, ಎಲ್ಲಾ ಕಾರ್ಯಕ್ರಮ, ಧಾರ್ಮಿಕ ಸ್ಥಳ ಬಂದ್: ಅಂಕೆ ಮೀರಿದ ಕೊರೋನಾ ತಡೆಗೆ ಟಫ್ ರೂಲ್ಸ್ ಜಾರಿಗೆ ಶಿಫಾರಸು
ಇದೇ ವೇಳೆ ವಿಜಯಪುರ ಜಿಲ್ಲೆಯ ಐತಿಹಾಸಿಕ ಗೋಲಗುಮ್ಮಟಕ್ಕೂ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐತಿಹಾಸಿಕ ತಾಣಗಳು, ಸ್ಮಾರಕಗಳು, ಮ್ಯೂಸಿಯಂ ಗಳಿಗೆ ಪ್ರವಾಸಿಗರ ಭೇಟಿಗೆ ಒಂದು ತಿಂಗಳ ಕಾಲ ನಿರ್ಬಂಧ ವಿಧಿಸಿರುವುದಾಗಿ ಇಲಾಖೆ ತಿಳಿಸಿದೆ.