ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ನೋಯ್ಡಾದ ಸೆಕ್ಟರ್ 20 ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು ತನ್ನ ಬಾಯ್ಫ್ರೆಂಡ್ ಜೊತೆ ಮದುವೆಯಾಗುವ ಸಲುವಾಗಿ ತಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಹೇಳಿದ್ದಾಳೆ.
23 ವರ್ಷದ ಈಕೆ 2 ತಿಂಗಳ ಹಿಂದೆ ಸೆಕ್ಟರ್ 9ರಿಂದ ನಾಪತ್ತೆಯಾಗಿದ್ದಳು. ಮಂಗಳವಾರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಯುವತಿ ಈ ಮಾಹಿತಿಯನ್ನ ನೀಡಿದ್ದಾಳೆ.
ನಾನು ಸ್ವ ಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದೇನೆ. ನಾನು ನನ್ನ ಪತಿಯ ಜೊತೆಯೇ ಇರಲು ಬಯಸುತ್ತೇನೆ ಹಾಗೂ ನನಗೆ ಪೋಷಕರೊಂದಿಗೆ ಬದುಕಲು ಇಷ್ಟವಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾಳೆ.
ತಮ್ಮ ಮಗಳನ್ನ ಅಪಹರಣ ಮಾಡಲಾಗಿದೆ ಎಂದು ಆಕೆಯ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರನ್ನ ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ, ಯಾರ ಜೊತೆ ಬದುಕಬೇಕು ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರ ಆಕೆಗೆ ಇದೆ ಎಂದು ಹೇಳಿದೆ.
ಫೆಬ್ರವರಿ 22ರಿಂದ ಮನೆಯಿಂದ ನಾಪತ್ತೆಯಾಗಿದ್ದ ಯುವತಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಇದಾದ ಬಳಿಕ ಪೊಲೀಸರಿಗೆ ದೂರನ್ನ ನೀಡಿದ್ದರು. ಈ ದಂಪತಿ ಪ್ರಸ್ತುತ ಪ್ರಯಾಗ್ರಾಜ್ನಲ್ಲಿ ವಾಸಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.