alex Certify ನೃತ್ಯ​ ಮಾಡಲು ಹೋಗಿ ಪರವಾನಿಗೆಯನ್ನೇ ಕಳೆದುಕೊಂಡ ವೈದ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೃತ್ಯ​ ಮಾಡಲು ಹೋಗಿ ಪರವಾನಿಗೆಯನ್ನೇ ಕಳೆದುಕೊಂಡ ವೈದ್ಯೆ..!

ರೋಗಿಯೊಬ್ಬರ ದೇಹದಿಂದ ಕೊಬ್ಬನ್ನ ತೆಗೆದ ಬಳಿಕ ಅದನ್ನ ಹಿಡಿದುಕೊಂಡು ನೃತ್ಯ ಮಾಡುತ್ತಾ ಟಿಕ್​ಟಾಕ್​​ನಲ್ಲಿ ವಿಡಿಯೋ ಶೇರ್​ ಮಾಡಿದ್ದ ಬ್ರೆಜಿಲ್​ ವೈದ್ಯೆಯ ಪರವಾನಿಗೆಯನ್ನ ರದ್ದು ಮಾಡಲಾಗಿದೆ. ಪ್ಲಾಸ್ಟಿಕ್​ ಸರ್ಜನ್​ ಆಗಿದ್ದ ಕ್ಯಾರೆನ್​ ಟ್ರಿಸಾಗ್ಲಿಯೋ ಗಾರ್ಸಿಯಾ ಎಂಬವರು ಕೊಬ್ಬನ್ನ ಹಿಡಿದು ವಿಡಿಯೋ ಮಾಡಲು ಹೋಗಿ ಲೈಸೆನ್ಸ್​​ನ್ನೇ ಕಳೆದುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಸರ್ಜನ್​ ಹಾಡೊಂದಕ್ಕೆ ನೃತ್ಯ ಮಾಡುವ ವೇಳೆಯಲ್ಲಿ ಕೈಯಲ್ಲಿ ಈ ಮಾಂಸ ಹಿಡಿದುಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಈಕೆ ಇದು ಸ್ತನ ಎಂದು ಹೇಳಿದ್ದಾರೆ. ಬಳಿಕ ಇನ್ನೊಂದು ಬ್ಯಾಗ್​​ನ್ನು ತೋರಿಸುತ್ತಾ ಇದು ಅಂಡರ್​ ಆರ್ಮ್​ ಕೊಬ್ಬು ಎಂದು ಬರೆದಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ ಕ್ಯಾರೆನ್​ ಮಾನವನ ದೇಹದ ಕೊಬ್ಬು ಹಾಗೂ ಚರ್ಮವನ್ನ ಹಿಡಿದು ಇಂದಿನ ಪ್ರಶಸ್ತಿ ಎಂದು ಹೇಳುತ್ತಾರೆ. ಈ ವಿಡಿಯೋ 11 ಮಿಲಿಯನ್​ಗಿಂತಲೂ ಹೆಚ್ಚು ಲೈಕ್ಸ್​ ಸಂಪಾದಿಸಿದೆ. ಸ್ಥಳೀಯ ಮೆಡಿಕಲ್​ ಬೋರ್ಡ್​ ಈ ವೈದ್ಯೆಯ ಪರವಾನಿಗೆಯನ್ನ ರದ್ದು ಮಾಡಿದೆ. ಅಲ್ಲದೇ ಈ ಸಂಬಂಧ ವಿಚಾರಣೆಗೆ ಆದೇಶ ನೀಡಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...