ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗ್ತಿದೆ. ಕೇಂದ್ರ ಸರ್ಕಾರ ಲಸಿಕೆ ಅಭಿಯಾನ ನಡೆಸುತ್ತಿದೆ. ಆದ್ರೆ ಬಹುತೇಕ ಜನರು ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಇದಕ್ಕೆ ಲಸಿಕೆಯಿಂದಾಗ್ತಿರುವ ಅಡ್ಡ ಪರಿಣಾಮ ಕಾರಣ. ಅಡ್ಡ ರಿಣಾಮಕ್ಕೆ ಹೆದರಿ ಜನರು ಲಸಿಕೆ ಹಾಕಿಸಿಕೊಳ್ತಿಲ್ಲ. ಆದ್ರೆ ಅನಗತ್ಯ ಆತಂಕ ಪಡಬೇಕಾಗಿಲ್ಲ. ಲಸಿಕೆ ನೀಡಿದ ನಂತ್ರ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ.
ಸಿ.ಡಿ.ಸಿ. ಪ್ರಕಾರ ಲಸಿಕೆ ಹಾಕಿದ ನಂತ್ರ ಕೆಲ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದ್ರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಜ್ವರ, ಉರಿಯೂತ ಸಾಮಾನ್ಯ ಲಕ್ಷಣಗಳಲ್ಲಿ ಒಂದು. ಲಸಿಕೆ ಹಾಕಿದ ನಂತ್ರ ನೋವು, ಕೆಂಪು ಊತ, ಜ್ವರ, ಸ್ನಾಯು ನೋವು, ತಲೆನೋವು ಮತ್ತು ವಾಂತಿ ಸಮಸ್ಯೆಗಳಿದ್ದರೆ ಚಿಂತಿಸಬೇಕಾಗಿಲ್ಲ. ಇದು ಸಾಮಾನ್ಯ ಲಕ್ಷಣವಾಗಿದೆ.
ಕೊರೊನಾ ಲಸಿಕೆ ನಂತ್ರ ನೋವು ಕಾಣಿಸಿಕೊಂಡರೆ ಸ್ವಚ್ಛ ತಣ್ಣನೆ ಬಟ್ಟೆಯನ್ನು ಅದ್ರ ಮೇಲೆ ಇರಿಸಿ. ಅತಿ ಹೆಚ್ಚು ನೀರು ಸೇವನೆ ಮಾಡಿ. ಜ್ವರ ಬಂದರೆ ತೆಳುವಾದ ಬಟ್ಟೆಯನ್ನು ಧರಿಸಿ. ವೈದ್ಯರನ್ನು ಸಂಪರ್ಕಿಸಿ. ಜ್ವರಕ್ಕೆ ಮಾತ್ರೆ ಸೇವನೆ ಮಾಡಿ. ಯಾವುದೇ ಮಾತ್ರೆ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಈ ಲಕ್ಷಣಗಳು ಎರಡು-ಮೂರು ದಿನ ಮಾತ್ರ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ನೋವು, ಜ್ವರ ಹೆಚ್ಚಿನ ದಿನವಿದ್ದರೆ ವೈದ್ಯರನ್ನು ಸಂಪರ್ಕಿಸಿ.