ಪಾರಿವಾಳಗಳಿಗೆ, ಗುಬ್ಬಚ್ಚಿಗಳಿಗೆ, ಬೀದಿ ನಾಯಿಗಳಿಗೆ ಹಾಗೂ ಬೆಕ್ಕುಗಳಿಗೆ ಪ್ರಾಣಿ ಪ್ರಿಯರು ಸಾಮಾನ್ಯವಾಗಿ ಆಹಾರವನ್ನ ಹಾಕುತ್ತಿರ್ತಾರೆ. ಆದರೆ ಬೆಂಗಳೂರಿನ 55 ವರ್ಷದ ಮಹಿಳೆಯೊಬ್ಬರು ಕಳೆದ 20 ವರ್ಷಗಳಿಂದ ಗಿಡುಗಗಳಿಗೆ ಆಹಾರ ಬಡಿಸುವ ಕಾರ್ಯ ಮಾಡ್ತಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಇವರು ಚಿಕನ್ ತಲೆ ಹಾಗೂ ಕಾಲುಗಳನ್ನ ಆಹಾರದ ರೂಪದಲ್ಲಿ ನೀಡ್ತಿದ್ದಾರೆ.
ಮೆರ್ಲಿನ್, ಸಮೀಪದ ಎಲ್ಲಾ ಕೋಳಿ ಅಂಗಡಿಗಳ ಜೊತೆ ಮಾತನಾಡಿದ್ದು ವ್ಯರ್ಥವಾಗುವ ಚಿಕನ್ ಕೆಲ ಭಾಗಗಳನ್ನ ತೆಗೆದುಕೊಳ್ತಾರೆ. ಇದನ್ನ ಮನೆಗೆ ತೆಗೆದುಕೊಂಡು ಹೋಗಿ ಚೆನ್ನಾಗಿ ತೊಳೆದು ಬಳಿಕ ಅದನ್ನ ಬೇಯಿಸುವ ಮೂಲಕ ಅದನ್ನ ಹೈಜಿನ್ ಮಾಡುತ್ತಾರೆ. ಬಳಿಕ ಬ್ಯಾಗಿನಲ್ಲಿ ಈ ಎಲ್ಲಾ ಪದಾರ್ಥಗಳನ್ನ ತುಂಬಿಕೊಂಡು ಹೋಗ್ತಾರೆ.
ನಿಗದಿತ ಜಾಗದಲ್ಲಿ ಈ ಪದಾರ್ಥಗಳನ್ನ ಬಡಿಸುತ್ತಾರೆ. ಕಣ್ಮುಚ್ಚಿ ತೆರೆಯೋಷ್ಟರಲ್ಲಿ ಗಿಡುಗಗಳು ಈ ಎಲ್ಲಾ ಪೀಸ್ಗಳನ್ನ ಕಚ್ಚಿಕೊಂಡು ಮರೆಯಾಗಿಬಿಡುತ್ತವೆ. ಮೆರ್ಲಿನ್ ಗಿಡುಗಗಳಿಗೆ ಮಾತ್ರವಲ್ಲದೇ ಬೀದಿ ಶ್ವಾನಗಳಿಗೂ ಮಾಂಸವನ್ನ ನೀಡುತ್ತಾರೆ.
ಈ ಎಲ್ಲಾ ಕೆಲಸಗಳನ್ನ ಮಾಡೋದು ಮೆರ್ಲಿನ್ಗೆ ಸುಲಭವಾಗಿರಲಿಲ್ಲ. ಕೆಲ ಜನರು ಈಕೆಯ ಕೆಲಸವನ್ನ ವಿರೋಧಿಸಿದ್ದಾರೆ. ಆದರೆ ಕಿಶೋರ್ರಂತಹ ಜನರು ಈ ಮಹಿಳೆಯ ಕಾರ್ಯವನ್ನ ಪ್ರೋತ್ಸಾಹಿಸಿದ್ದಾರೆ.
ಈಕೆ ಕಳೆದ 20 ವರ್ಷಗಳಿಂದ ಈ ಕೆಲಸವನ್ನ ಮಾಡುತ್ತಿದ್ದಾರೆ. ನಾವು ಆಕೆಗೆ ಸ್ಥಳಾವಾಕಾಶ ನೀಡುವ ಮೂಲಕ ಅಳಿಲಸೇವೆ ಮಾಡುತ್ತಿದ್ದೇವೆ ಎಂದು ಕಿಶೋರ್ ಹೇಳಿದ್ರು.