alex Certify ಬರೋಬ್ಬರಿ 12 ವರ್ಷಗಳ ಬಳಿಕ ಕೂದಲಿಗೆ ಕತ್ತರಿ ತಾಗಿಸಿದ ʼವಿಶ್ವ ದಾಖಲೆʼಯ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 12 ವರ್ಷಗಳ ಬಳಿಕ ಕೂದಲಿಗೆ ಕತ್ತರಿ ತಾಗಿಸಿದ ʼವಿಶ್ವ ದಾಖಲೆʼಯ ಯುವತಿ..!

ನೀಳ ಕೂದಲನ್ನ ಹೊಂದಬೇಕು ಅನ್ನೋ ಆಸೆ ಬಹುತೇಕ ಎಲ್ಲ ಮಹಿಳೆಯರಿಗೂ ಇರುತ್ತೆ. ನಿಮ್ಮ ಈ ನೀಳ ಕೇಶರಾಶಿಯೇ ಸಮಾಜದಲ್ಲಿ ನಿಮಗೊಂದು ಹೆಸರನ್ನ ತಂದುಕೊಡುತ್ತೆ ಅಂದರೆ ಅದಕ್ಕಿಂತ ಸಂತೋಷದ ವಿಚಾರ ಇನ್ನೊಂದಿಲ್ಲ.

ಇದೇ ರೀತಿ ನೀಳ ಕೂದಲನ್ನ ಹೊಂದಿರುವ ಅಪ್ರಾಪ್ತೆ ಎಂಬ ವಿಶ್ವ ದಾಖಲೆಯನ್ನ ನಿರ್ಮಿಸಿದ್ದ 18ರ ಯುವತಿ ಇದೀಗ ಅರ್ಥಪೂರ್ಣ ಕಾರ್ಯಕ್ಕಾಗಿ ತಮ್ಮ ಕೂದಲನ್ನ ಕತ್ತರಿಸಿದ್ದಾರೆ.

ಗುಜರಾತ್​​ನ ಮೊಡಾಸಾ ನಿವಾಸಿಯಾಗಿರುವ ನಿಲಾಂಶಿ ಪಟೇಲ್​​ 2018ರಿಂದ ವಿಶ್ವದಲ್ಲೇ ಅತೀ ಉದ್ದ ಕೂದಲನ್ನ ಹೊಂದಿರುವ ಅಪ್ರಾಪ್ತೆ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ಈಕೆಗೆ 16 ವರ್ಷವಾಗಿದ್ದಾಗ ಕೂದಲು 170.5 ಸೆಂಟಿಮೀಟರ್​ ಉದ್ದ ಹೊಂದಿತ್ತು. 18 ವರ್ಷದ ಹುಟ್ಟಿದ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಅಂದರೆ ಜುಲೈ 2020ರಲ್ಲಿ ಈ ಕೂದಲನ್ನ ಅಳತೆ ಮಾಡಿದ ವೇಳೆ ಅದು 200 ಸೆಂಟಿಮೀಟರ್​ನಷ್ಟು ಬೆಳೆದಿತ್ತು. ತಮ್ಮ ಕೇಶ ರಾಶಿ ಮೂಲಕವೇ ನಿಲಾಂಶಿ ವಿಶ್ವ ದಾಖಲೆಯನ್ನ ನಿರ್ಮಿಸಿದ್ದರು.

ಆದರೆ ಇದೀಗ ನಿಲಾಂಶಿ ತಮ್ಮ ಕೂದಲನ್ನ ಕತ್ತರಿಸಿದ್ದಾರೆ. ನನ್ನ ಕೂದಲು ನನಗೆ ಒಳ್ಳೆಯದನ್ನ ಮಾಡಿದೆ. ನನ್ನ ಕೇಶರಾಶಿಯಿಂದಾಗಿ ನಾನು ನಿಜ ಜೀವನದ ರಪುಂಜೆಲ್​ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದೆ. ಇದೀಗ ನನ್ನ ಕೇಶರಾಶಿಗೆ ನಾನು ಏನಾದರೊಂದನ್ನ ನೀಡುವ ಸಮಯ ಎಂದು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಸಾಧಕಿ ನಿಲಾಂಶಿ ಹೇಳಿದ್ದಾರೆ.

ನಿಲಾಂಶಿ 6 ವರ್ಷ ವಯಸ್ಸಿನವಳಾಗಿದ್ದಾಗ ಸಲೂನ್​ನಲ್ಲಾದ ಒಂದು ಕೆಟ್ಟ ಅನುಭವದ ಬಳಿಕ ಕೂದಲನ್ನ ಕತ್ತರಿಸದೇ ಇರಲು ನಿರ್ಧರಿಸಿದ್ರು. ವಾರಕ್ಕೊಮ್ಮೆ ತಲೆ ಸ್ನಾನ ಮಾಡ್ತಿದ್ದ ನಿಲಾಂಶಿಗೆ ಕೂದಲನ್ನ ಬಾಚಿಕೊಳ್ಳಲು ತಾಯಿ ನೆರವಾಗುತ್ತಿದ್ದರು.

ಕೂದಲನ್ನ ಕತ್ತರಿಸುವ ನಿರ್ಧಾರಕ್ಕೆ ಬಂದ ನಿಲಾಂಶಿ ಮುಂದೆ ಮೂರು ಆಯ್ಕೆಗಳಿದ್ದವು. ಕೂದಲನ್ನ ಹರಾಜಿಗೆ ಇಡುವುದು, ಕ್ಯಾನ್ಸರ್​ ರೋಗಿಗಳಿಗೆ ದಾನ ಮಾಡುವುದು ಹಾಗೂ ಮ್ಯೂಸಿಯಂನಲ್ಲಿ ಇಡುವುದು.

ನಿಲಾಂಶಿ ತಾಯಿ ಕಾಮಿನಿಬೆನ್​​ ಮ್ಯೂಸಿಯಂನಲ್ಲಿ ಕೂದಲನ್ನ ಸಂಗ್ರಹಿಸಿ ಇಡುವಂತೆ ಸಲಹೆ ನೀಡಿದ್ರು. ಆದರೆ ನೀಲಾಂಶಿ ಈ ಕೂದಲನ್ನ ಕ್ಯಾನ್ಸರ್​ ರೋಗಿಗಳಿಗೆ ನೀಡಲು ನಿರ್ಧರಿಸಿದ್ರು.

ಬರೋಬ್ಬರಿ 12 ವರ್ಷದ ಕೂದಲನ್ನ ಕತ್ತರಿಸಿದ ನೀಲಾಂಶಿ ತಮ್ಮ ಕೂದಲುಗಳಿಗೆ ಮುತ್ತನ್ನ ನೀಡಿದ್ರು. ಇದೀಗ ನೀಲಾಂಶಿ ಶಾರ್ಟ್​ ಹೇರ್​ ಕಟ್​ ಸ್ಟೈಲ್​ನ್ನ ಎಂಜಾಯ್​ ಮಾಡ್ತಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...