ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಇದೀಗ ಮುಂಬೈನಲ್ಲಿ 5 ಸ್ಟಾರ್ ಹೋಟೆಲ್ಗಳನ್ನೂ ಬಳಕೆ ಮಾಡಲು ನಿರ್ಧರಿಸಲಾಗಿದೆ.
ಸೌಮ್ಯ ಪ್ರಮಾಣದಲ್ಲಿ ಸೋಂಕಿನ ಲಕ್ಷಣ ಹೊಂದಿರುವವರನ್ನ ಐಶಾರಾಮಿ ಹೋಟೆಲ್ಗಳಲ್ಲಿ ಇಡಲು ಖಾಸಗಿ ಆಸ್ಪತ್ರೆಗಳು ನಿರ್ಧರಿಸಿದೆ. ಈಗಾಗಲೇ 2 ಹೋಟೆಲ್ಗಳು ಇಂದಿನಿಂದ ಕಾರ್ಯ ಆರಂಭಿಸಿವೆ.
ಖಾಸಗಿ ಆಸ್ಪತ್ರೆಗಳು 4 ಹಾಗೂ 5 ಸ್ಟಾರ್ ಹೋಟೆಲ್ಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು ಯಾರಿಗೆ ಐಸಿಯು ಹಾಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇಲ್ಲವೋ ಅಂತರವನ್ನ ಹೋಟೆಲ್ಗೆ ಶಿಫ್ಟ್ ಮಾಡಲಿದೆ. ಈ ರೀತಿ ರೋಗಿಗಳನ್ನ ಹೋಟೆಲ್ಗೆ ವರ್ಗಾಯಿಸುವ ಮುನ್ನ ವೈದ್ಯರ ಅನುಮತಿಯನ್ನ ಪಡೆಯೋದು ಕಡ್ಡಾಯವಾಗಿದೆ.
ಯಾರಿಗೆ ಕಡಿಮೆ ವೈದ್ಯಕೀಯ ಸೌಲಭ್ಯ ಸಾಕಾಗಬಹುದು ಎಂದೆನಿಸತ್ತೋ ಅಂತವರನ್ನ ಹೋಟೆಲ್ನಲ್ಲಿಡಲು ಪಾಲಿಕೆ ಪ್ಲಾನ್ ಮಾಡಿದೆ. ಇದಕ್ಕಾಗಿ 20 ಕೊಠಡಿಗಳಿರುವ ಹೋಟೆಲ್ಗಳನ್ನ ಬಾಡಿಗೆಗೆ ಪಡೆಯಲಾಗಿದೆ.ಈ ಹೋಟೆಲ್ಗಳಲ್ಲೂ ವೈದ್ಯರು, ನರ್ಸ್ , ಔಷಧಿ ಹಾಗೂ ಆಂಬುಲೆನ್ಸ್ ಸೇವೆ ಇರಲಿದೆ.
ಇದಕ್ಕಾಗಿ ಆಸ್ಪತ್ರೆಗಳು 4000 ರೂಪಾಯಿಗಳವರೆಗೆ ದಿನದ ಬಿಲ್ ಮಾಡಬಹುದು. ಒಂದು ವೇಳೆ ರೋಗಿಯ ಜೊತೆ ಸಂಬಂಧಿಕರು ವಾಸ್ತವ್ಯ ಹೂಡೋದಾದಲ್ಲಿ 6000 ರೂಪಾಯಿ ಬಿಲ್ ವಿಧಿಸಲಾಗುತ್ತೆ. ಲಕ್ಷಣ ರಹಿತ ಸೋಂಕಿತರೂ ಈ ಹೋಟೆಲ್ಗಳಲ್ಲಿ ಇರಬಹುದಾಗಿದೆ.